ದೇಶ

ಶಿವಸೇನಾ - ಬಿಜೆಪಿ ಮೈತ್ರಿ: ಮುಂದಿನ 24 ಗಂಟೆ ನಿರ್ಣಾಯಕ ಎಂದ ಸಂಜಯ್ ರೌತ್

Lingaraj Badiger

ಮುಂಬೈ: ಮುಂದಿನ ತಿಂಗಳು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಬಿಜೆಪಿ-ಶಿವಸೇನೆ ನಡುವೆ ಸೀಟು ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದ್ದು, ಉಭಯ ಪಕ್ಷಗಳ ನಡುವೆ ಸ್ಥಾನ ಹಂಚಿಕೆ ಸೂತ್ರ ಬಹುತೇಕ ಯಶಸ್ವಿಯಾಗಿದ್ದು, ಮೈತ್ರಿಗೆ ಮುಂದಿನ 24 ಗಂಟೆ ನಿರ್ಣಾಯಕ ಎಂದು ಶಿವಸೇನಾ ನಾಯಕ ಸಂಜಯ್ ರೌತ್ ಅವರು ಹೇಳಿದ್ದಾರೆ.

ಇಂದು ಬೆಳಗ್ಗೆಷ್ಟೆ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು, ಸೂಕ್ತ ಸಮಯದಲ್ಲಿ ಸ್ಥಾನ ಹಂಚಿಕೆಯನ್ನು ಘೋಷಿಸಲಾಗುವುದು ಎಂದು ಹೇಳಿದ್ದರು.

ಬಿಜೆಪಿ-ಶಿವಸೇನೆ ಮೈತ್ರಿ ಬಗ್ಗೆ ನನಗೂ ಕಳವಳ ಇದೆ. ಆದಾಗ್ಯೂ ಸೂಕ್ತ ಸಮಯದಲ್ಲಿ ಸೀಟು ಹಂಚಿಕೆಯನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಮಹಾ ಸಿಎಂ ತಿಳಿಸಿದ್ದರು.

ಮಹಾರಾಷ್ಟ್ರದ ಒಟ್ಟು 288 ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಶಿವಸೇನೆಗಳು ತಲಾ 144 ಕ್ಷೇತ್ರ ಹಂಚಿಕೊಳಳಬೇಕು ಎಂದು ಶಿವಸೇನೆ ಪಟ್ಟು ಹೇಳಿತ್ತು. ಆದರೆ ಬಿಜೆಪಿ ಅದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಕೊನೆಗೆ ಕನಿಷ್ಠ 120 ಕ್ಷೇತ್ರಗಳಲ್ಲಾದರೂ ಸ್ಪರ್ಧಿಸಲು ಅವಕಾಶ ನೀಡುವಂತೆ ಶಿವಸೇನೆ ಪಟ್ಟು ಹಿಡಿದಿದೆ. ಅದಕ್ಕೂ ಬಿಜೆಪಿ ಸೊಪ್ಪು ಹಾಕುತ್ತಿಲ್ಲ. ಹೀಗಾಗಿ ಸೀಟು ಹಂಚಿಕೆ ಕಗ್ಗಂಟ್ಟಾಗಿ ಉಳಿದಿದೆ.

SCROLL FOR NEXT