ದೇಶ

ಅಮ್ಮನ ಅಂತಿಮ ಆಶಯವನ್ನು ಈಡೇರಿಸಿದ ಸುಷ್ಮಾ ಸ್ವರಾಜ್ ಪುತ್ರಿ

Raghavendra Adiga

ನವದೆಹಲಿ: ಹಿರಿಯ ಬಿಜೆಪಿ ನಾಯಕಿ, ದಿವಂಗತ ಸುಷ್ಮಾ ಸ್ವರಾಜ್ ಅವರ  ಕೊನೆಯ ಆಶಯವನ್ನು ಅವರ ಮಗಳು ಶುಕ್ರವಾರ ನೆರವೇರಿಸಿದ್ದಾರೆ ಎಂದು ಸುಷ್ಮಾ ಸ್ವರಾಜ್ ಅವರ ಪತಿ ಸ್ವರಾಜ್ ಕೌಶಲ್ ಹೇಳಿದ್ದಾರೆ.

ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ವಾದಿಸಿದ್ದ ಭಾರತದ ಹಿರಿಯ ವಕೀಲ ಹರೀಶ್ ಸಾಳ್ವೆ  ಅವರಿಗೆ 1 ರೂ ಶುಲ್ಕ ನೀಡಬೇಕೆಂಬುದು ಸ್ವರಾಜ್ ಅವರ ಕೊನೆಯ ಆಶಯವಾಗಿತ್ತು. 

"ನಿನ್ನ ಮಗಳು ಬನ್ಸೂರಿ ಇಂದು ನಿನ್ನ ಕೊನೆಯ ಆಸೆಯನ್ನು ಈಡೇರಿಸಿದ್ದಾಳೆ. ನೀನು ಹೇಳಿದಂತೆ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ವಾದಿಸಿದ ವಕೀಲ ಸಾಳ್ವೆ ಅವರಿಗೆ ಬನ್ಸೂರಿ  1 ರೂ ಶುಲ್ಕವನ್ನು ಪಾವತಿಸಿದ್ದಾರೆ" ಸ್ವರಾಜ್ ಟ್ವಿಟ್ಟರ್ ಸಂದೇಶದಲ್ಲಿ ಹಂಚಿಕೊಂಡಿದ್ದಾರೆ.

ಸುಷ್ಮಾ ಸ್ವರಾಜ್ ಸಾವಿಗೆ ಒಂದು ದಿನ ಮುನ್ನ ಸಾಳ್ವೆ ಅವರೊಡನೆ ಮಾತನಾಡುತ್ತಾ, ಜಾಧವ್ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ರೂ 1 ರ ಶುಲ್ಕವನ್ನು ತೆಗೆದುಕೊಳ್ಳುವಂತೆ ಹೇಳಿದ್ದರು.ಅದಾಗಿ ಕೇವಲ ಹತ್ತು ನಿಮಿಷದಲ್ಲಿ ಆಕೆ ಹೃದಯಾಘಾತವಾಗಿ ಅಸುನೀಗಿದ್ದರು.

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ ಯಶಸ್ಸು ಗಳಿಸಲು ಸುಷ್ಮಾ ಸ್ವರಾಜ್ ಹಾಗೂ ನರೇಂದ್ರ ಮೋದಿ ಕಾರಣವೆಂದು ಸಾಳ್ವೆ ಹೇಳುತ್ತಾರೆ.

ಏಳು ಬಾರಿ ಸಂಸದರಾದ ಸುಷ್ಮಾ ಸ್ವರಾಜ್ ತಮ್ಮ 67ನೇ ವಯಸ್ಸಿನಲ್ಲಿ ನಿಧನರಾದರು.

SCROLL FOR NEXT