ಸಂಗ್ರಹ ಚಿತ್ರ 
ದೇಶ

ಜಮ್ಮು ಎನ್ ಕೌಂಟರ್ ನಲ್ಲಿ ಪ್ರಮುಖ ಹಿಜ್ಬುಲ್ ಕಮಾಂಡರ್ ಒಸಾಮಾ ಹತ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆಯಲು ಸಂಚು ರೂಪಿಸಿದ್ದ ಮೂವರು ಉಗ್ರರನ್ನು ಸೇನೆ ಸೆದೆಬಡಿದಿದ್ದು, ಈ ಮೂವರು ಮೃತ ಉಗ್ರರ ಪೈಕಿ ಕಣಿವೆ ರಾಜ್ಯದ ಮೋಸ್ಟ್ ನಟೋರಿಯಸ್ ಉಗ್ರ ಒಸಾಮಾ ಕೂಡ ಸೇರಿದ್ದಾನೆ ಎಂದು ತಿಳಿದುಬಂದಿದೆ.

ಹಿರಿಯ ಬಿಜೆಪಿ ಮುಖಂಡ ಅನಿಲ್ ಪರಿಹಾರ್, ಅಜಿತ್ ಪರಿಹಾರ್ ಹತ್ಯೆಯ ಪ್ರಮುಖ ಆರೋಪಿ ಉಗ್ರ ಒಸಾಮಾ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಅಟ್ಟಹಾಸ ಮೆರೆಯಲು ಸಂಚು ರೂಪಿಸಿದ್ದ ಮೂವರು ಉಗ್ರರನ್ನು ಸೇನೆ ಸೆದೆಬಡಿದಿದ್ದು, ಈ ಮೂವರು ಮೃತ ಉಗ್ರರ ಪೈಕಿ ಕಣಿವೆ ರಾಜ್ಯದ ಮೋಸ್ಟ್ ನಟೋರಿಯಸ್ ಉಗ್ರ ಒಸಾಮಾ ಕೂಡ ಸೇರಿದ್ದಾನೆ ಎಂದು ತಿಳಿದುಬಂದಿದೆ.

ಜಮ್ಮು–ಕಿಶ್ತ್‌ವಾರ್ ರಾಷ್ಟ್ರೀಯ ಹೆದ್ದಾರಿಯ ಬಟೋಟೆ ಪ್ರದೇಶದಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ಮೂವರು ಉಗ್ರರು ಮನೆಯಲ್ಲಿದ್ದವರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು. ವಿಚಾರ ತಿಳಿಯುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಸೇನೆ ಮೂವರೂ ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಆದರೆ ಸೇನೆಯ ಓರ್ವ ಯೋಧ ಹುತಾತ್ಮರಾಗಿ ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದರು.

ಇನ್ನು ಎನ್ ಕೌಂಟರ್ ಬಳಿಕ ಉಗ್ರರ ಗುರುತು ಪತ್ತೆ ಕಾರ್ಯ ನಡೆಸಲಾಗಿದ್ದು, ಈ ವೇಳೆ ಮೂವರು ಮೃತ ಉಗ್ರರ ಪೈಕಿ ಓರ್ವ ಉಗ್ರನನ್ನು ಒಸಾಮಾ ಎಂದು ಗುರುತಿಸಲಾಗಿದೆ. ಈತ ಕುಖ್ಯಾತ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಗೆ ಸೇರದವನಾಗಿದ್ದು, ಈ ಹಿಂದೆ ಹಿರಿಯ ಬಿಜೆಪಿ ಮುಖಂಡ ಅನಿಲ್ ಪರಿಹಾರ್, ಅಜಿತ್ ಪರಿಹಾರ್ ಹತ್ಯೆಯ ರೂವಾರಿಯಾಗಿದ್ದ ಎಂದು ತಿಳಿದುಬಂದಿದೆ. ಈತನೊಂದಿಗೆ ಈತನ ಸಹಚರರಾದ ಜಾಹಿದ್, ಫರೂಕ್ ಎಂಬುವವರೂ ಇದ್ದರು. ಇವರನ್ನೂ ಕೂಡ ಸೇನೆ ಹತ್ಯೆಗೈದಿದೆ.

ರಾಮಬನ್ ಜಿಲ್ಲೆಯಲ್ಲಿ ಐವರು ಭಯೋತ್ಪಾದಕರು ಇದ್ದಾರೆ ಎಂದು ಸೇನಾ ವಕ್ತಾರರು ಶನಿವಾರ ಬೆಳಿಗ್ಗೆ ಮಾಹಿತಿ ನೀಡಿದ್ದರು. ಧರ್ಮುಂದ್ ಗ್ರಾಮದಲ್ಲಿ ಶೋಧ ನಡೆಸುತ್ತಿದ್ದ ಸೇನೆಯ ಕ್ಷಿಪ್ರ ಕಾರ್ಯಾಚರಣೆ ತಂಡದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ, ಗ್ರೆನೇಡ್‌ ಎಸೆದರು. ಸಣ್ಣ ಪ್ರಮಾಣದ ಎನ್ಕೌಂಟರ್ ಕೂಡ ನಡೆಯಿತು.  ಸೇನೆಯಿಂದ ತಪ್ಪಿಸಿಕೊಂಡ ಉಗ್ರರು ಮಾರುಕಟ್ಟೆ ಪ್ರದೇಶದ ಮನೆಯೊಂದಕ್ಕೆ ನುಗ್ಗಿದರು. ಬಿಜೆಪಿ ಕಾರ್ಯಕರ್ತ ವಿಜಯ್ ಕುಮಾರ್ ಅವರ ಮನೆಯ ಸದಸ್ಯರನ್ನು ಉಗ್ರರು ಒತ್ತೆಯಿರಿಸಿಕೊಂಡರು. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಗುಂಡಿನ ಚಕಮಕಿ ಆರಂಭವಾಯಿತು ಎಂದು ಸೇನಾವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ತಿಳಿಸಿದ್ದಾರೆ.  ಕಿಶ್ತ್‌ವಾರ್ ಕಡೆಯಿಂದ ಉಗ್ರರು ಬಂದಿರುವ ಶಂಕೆಯಿದ್ದು, ಹೆದ್ದಾರಿಯ ತಾತ್ಕಾಲಿಕ ಶೆಡ್‌ನಲ್ಲಿ ಅವರು ರಾತ್ರಿ ಕಳೆದಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT