ಸಂಗ್ರಹ ಚಿತ್ರ 
ದೇಶ

ದೆಹಲಿ ಗಲಭೆ ಪ್ರಕರಣ: 35 ವರ್ಷದ ಜಾಮಿಯಾ ವಿದ್ಯಾರ್ಥಿ ಬಂಧನ

 ಈಶಾನ್ಯ ದೆಹಲಿಯಲ್ಲಿ ಕೋಮು ಗಲಭೆಗಳನ್ನು ಪ್ರಚೋದಿಸುವ ಸಂಚು ರೂಪಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಯೋರ್ವನನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಕೋಮು ಗಲಭೆಗಳನ್ನು ಪ್ರಚೋದಿಸುವ ಸಂಚು ರೂಪಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಯೋರ್ವನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಜಾಮಿಯಾದಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದ ಮೀರನ್ ಹೈದರ್ (35) ಎಂಬಾತನನ್ನು ಬಂಧಿಸಲಾಗಿದೆ. ಈತ  ಆರ್‌ಜೆಡಿ ಯುವ ವಿಭಾಗದ ದೆಹಲಿ ಘಟಕದ ಅಧ್ಯಕ್ಷನಾಗಿದ್ದ. 

ಬುಧವಾರ ಬೆಳಿಗ್ಗೆ 10 ಗಂಟೆಗೆ ಹೈದರ್ ನನ್ನು ಲೋಧಿ ಕಾಲೋನಿ ಕಚೇರಿಯಲ್ಲಿ ಸ್ಪೆಷಲ್ ಸೆಲ್ ಕಚೇರಿಯಲ್ಲಿ ವಿಚಾರಣೆಗೆ ಕರೆಯಲಾಗಿತ್ತು. ಬಳಿಕ ಆತನ ಬಂಧನವಾಗಿದೆ.

ರಾಜ್ಯಸಭಾ ಸಂಸದ ಮತ್ತು ಆರ್‌ಜೆಡಿ ಮುಖಂಡ ಮನೋಜ್ ಝಾ "ದೆಹಲಿ ಪೊಲೀಸರು ಆತನನ್ನು ತನಿಖೆಗೆ ಕರೆದರು ಮತ್ತು ನಂತರ ಮೇಲಿನಿಂದ ಆದೇಶ ಬಂದ ನಂತರ ಆತನನ್ನು ಬಂಧಿಸಿದ್ದಾರೆ. ಹೈದರ್ ಕೊರೋನಾವೈರಸ್ ಬಿಕ್ಕಟ್ಟಿನ ಸಮಯದಲ್ಲಿ  ಜನರಿಗೆ ಸಹಾಯ ಮಾಡುತ್ತಿದ್ದರು" ಎಂದು ಟ್ವೀಟ್ ಮಾಡಿದ್ದಾರೆ. 

ಇನ್ನು ಜೆಎನ್‌ಯುನ  ಆರ್‌ಜೆಡಿ ಘಟಕವೂ ಹೈದರ್‌ನನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿತು ಮತ್ತು ಪೊಲೀಸರು 'ಜನ ಸ್ನೇಹಿ' ಆಗಬೇಕು ಮತ್ತು ಜನರನ್ನು ಹೆದರಿಸಬಾರದು ಎಂದು ಹೇಳಿದೆ."ದೇಶವು ಭಾರಿ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ, ಆದಾಗ್ಯೂ, ಭಿನ್ನಾಭಿಪ್ರಾಯದ ಧ್ವನಿಗಳನ್ನು ನಿಗ್ರಹಿಸಲು ವಿದ್ಯಾರ್ಥಿ ಕಾರ್ಯಕರ್ತರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಕಿರುಕುಳ ನೀಡಲಾಗುತ್ತಿದೆ" ಲಾಕ್ ಡೌನ್ ಸಮಯದಲ್ಲಿ ಅಗತ್ಯವಿರುವವರಿಗೆ ಪಡಿತರವನ್ನು ಒದಗಿಸಲು ಹೈದರ್ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದದ್ದಾಗಿ  ಜೆಸಿಸಿ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನನಗೆ ಇರೋದ್ 5 ಬೆರಳು: ಸಾವಿನ ವದಂತಿ ಮಧ್ಯೆ ಚಹಾ ಕುಡಿಯುತ್ತ ಕಾಣಿಸಿಕೊಂಡ ಇಸ್ರೇಲ್ ಪ್ರಧಾನಿ; ಇರಾನ್‌ಗೆ ಮುಖಭಂಗ; Video

'ಒಂದು ವೇಳೆ ಬದುಕಿದ್ದರೆ, ಹುಡುಕಿ ಕೊಲ್ಲುತ್ತೇವೆ': ಬೆಂಜಮಿನ್ ನೆತನ್ಯಾಹು ಸಾವಿನ ವದಂತಿಗಳ ನಡುವೆ ಇರಾನ್ ಎಚ್ಚರಿಕೆ!

ಯುದ್ಧ: ಮೊದಲ ಬಾರಿಗೆ Dancing Missile ಉಡಾಯಿಸಿದ Iran; 2 ಸಾವಿರ ಕಿ.ಮೀ ವ್ಯಾಪ್ತಿ.. ಅಮೆರಿಕಕ್ಕೆ ತಲೆನೋವು!

ಬಾಲಿವುಡ್ ನಟಿ ಮಧು ಮಲ್ಹೋತ್ರಾ ನಿಧನ

Reels ಗೀಳಿಗೆ ಮತ್ತೊಂದು ಬಲಿ: Delhi–Mumbai Expresswayನಲ್ಲಿ ಕ್ಯಾಂಟರ್ ಢಿಕ್ಕಿ, ಯುವಕ ಸಾವು! Video

SCROLL FOR NEXT