ಬ್ರಿಟನ್ ನ ಪ್ರಿನ್ಸ್ ಚಾರ್ಲ್ಸ್ 
ದೇಶ

ಬ್ರಿಟನ್ ನ ಪ್ರಿನ್ಸ್ ಚಾರ್ಲ್ಸ್ ಕೊರೋನಾ ಸೋಂಕಿಗೆ ಬೆಂಗಳೂರಿನಿಂದ ಆಯುರ್ವೇದದ ಚಿಕಿತ್ಸೆ! 

ಇಡೀ ವಿಶ್ವವೇ ಈ ಕೊರೋನಾ ವೈರಸ್ ಗೆ ಚಿಕಿತ್ಸೆ ಏನಪ್ಪಾ ಅಂತ ತಲೆಕೆಡಿಸಿಕೊಂಡಿರಬೇಕಾದರೆ ಬ್ರಿಟನ್ ರಾಜಮನೆತನ ಕೊರೋನಾ ವೈರಸ್ ನಿಂದ ಗುಣಮುಖವಾಗುವುದಕ್ಕೆ ಭಾರತದ ಆಯುರ್ವೇದ ವೈದ್ಯ ಪದ್ಧತಿ ಮೊರೆ ಹೋಗಿದೆ. 

ಬ್ರಿಟನ್ ನ ಪ್ರಿನ್ಸ್ ಚಾರ್ಲ್ಸ್ ಗೆ ಕೊರೋನಾ ವೈರಸ್ ಬಂದಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ. ಹೊಸ ವಿಷಯ ಏನಪ್ಪ ಅಂದರೆ ಇಡೀ ವಿಶ್ವವೇ ಈ ಕೊರೋನಾ ವೈರಸ್ ಗೆ ಚಿಕಿತ್ಸೆ ಏನಪ್ಪಾ ಅಂತ ತಲೆಕೆಡಿಸಿಕೊಂಡಿರಬೇಕಾದರೆ ಬ್ರಿಟನ್ ರಾಜಮನೆತನ ಕೊರೋನಾ ವೈರಸ್ ನಿಂದ ಗುಣಮುಖವಾಗುವುದಕ್ಕೆ ಭಾರತದ ಆಯುರ್ವೇದ ವೈದ್ಯ ಪದ್ಧತಿ ಮೊರೆ ಹೋಗಿದೆ. 

ಕೊರೋನಾ ಪೀಡಿತ ಪ್ರಿನ್ಸ್ ಚಾರ್ಲ್ಸ್ ಗೆ ಬೆಂಗಳೂರು ಮೂಲದ ವೈದ್ಯರು ಇಲ್ಲಿಂದಲೇ ಚಿಕಿತ್ಸೆ ನೀಡಿದ್ದಾರೆ ಎಂಬುದು ಮತ್ತೊಂದು ವಿಶೇಷದ ಸಂಗತಿ!

ಕೇಂದ್ರ ಆಯುಷ್ ಸಚಿವ ಶ್ರೀಪಾನ್ ನಾಯ್ಕ್ ಈ ವಿಷಯವನ್ನು ಬಹಿರಂಗಪಡಿಸಿದ್ದು, ಬೆಂಗಳೂರಿನ ಆಯುರ್ವೇದ ವೈದ್ಯರೊಬ್ಬರು ತಮ್ಮ ವೈದ್ಯ ಪದ್ಧತಿಯಿಂದ ಬ್ರಿಟನ್ ನ ಪ್ರಿನ್ಸ್ ಚಾರ್ಲ್ಸ್ ಗೆ ಔಷಧ ಸೂಚಿಸಿ ಅವರು ಗುಣಮುಖರಾಗಿದ್ದಾರೆಂದು ಹೇಳಿರುವುದನ್ನು ಹಂಚಿಕೊಂಡಿದ್ದಾರೆ. 

ಈ ಮೂಲಕ ಆಯುರ್ವೇದ ಹಾಗೂ ಹೋಮಿಯೋಪತಿಯಲ್ಲಿ ಕೊರೋನಾ ವೈರಸ್ ಗೆ ಚಿಕಿತ್ಸೆ ಇದೆ ಎಂದು ಶ್ರೀಪಾದ್ ನಾಯ್ಕ್ ಹೇಳಿದ್ದಾರೆ. ಬ್ರಿಟನ್ ನ ಪ್ರಿನ್ಸ್ ಚಾರ್ಲ್ಸ್ ಗೆ ಆಯುರ್ವೇದ ಔಷಧ ನೀಡಿರುವ ವೈದ್ಯ ಐಸಾಕ್ ಮಥಾಯ್ ಅವರು ಸೌಖ್ಯ ಎಂಬ ಆಯುರ್ವೇದ ರೆಸಾರ್ಟ್ ನಡೆಸುತ್ತಿದ್ದಾರೆ. 

ಪ್ರಿನ್ಸ್ ಚಾರ್ಲ್ಸ್ ಗೆ ನೀಡಲಾಗಿರುವ ಚಿಕಿತ್ಸೆಯ ವಿವರಗಳನ್ನು ಡಾ. ಐಸಾಕ್ ಮಥಾಯ್ ಅವರಿಂದ ಪಡೆದುಕೊಳ್ಳಲಾಗುತ್ತಿದೆ. ಸಮಗ್ರ ಅಧ್ಯಯನ ನಡೆಸಿ ವರದಿ ನೀಡಲು ಸೂಚಿಸಲಾಗಿದೆ ಎಂದು ಶ್ರೀಪಾದ್ ನಾಯ್ಕ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!

ಬರ ಎಫೆಕ್ಟ್: ರೈತರ ನೆರವಿಗೆ ಧಾವಿಸಿದ ಸರ್ಕಾರ; 1,250 ಕೋಟಿ ರೂ. ಮೊದಲ ಕಂತು ಬಿಡುಗಡೆ..!