ಕೊರೋನಾ ವೈರಸ್, ಲಾಕ್ ಡೌನ್ ಪರಿಣಾಮ: ಲಕ್ಷಾಂತರ ಉದ್ಯೋಗಕ್ಕೆ ಕುತ್ತು! 
ದೇಶ

ಕೊರೋನಾ ವೈರಸ್, ಲಾಕ್ ಡೌನ್ ಪರಿಣಾಮ: ಲಕ್ಷಾಂತರ ಉದ್ಯೋಗಕ್ಕೆ ಕುತ್ತು! 

ಕೊರೋನಾ ವೈರಸ್ ನಿಂದ ಲಾಕ್ ಡೌನ್ ಘೋಷಣೆಯಾಗಿರುವ ಪರಿಣಾಮ, ಹಲವು ಉದ್ದಿಮೆ, ಉದ್ಯೋಗಳ ಮೇಲೆ ತಟ್ಟುತ್ತಿದ್ದು ಟೆಕ್ಸ್ ಟೈಲ್ಸ್, ಸಿದ್ಧ ಉಡುಪು ಕ್ಷೇತ್ರದ ಲಕ್ಷಾಂತರ ಉದ್ಯೋಗಗಳಿಗೆ ಕುತ್ತು ಬರುವ ಎಚ್ಚರಿಕೆ ನೀಡಿದ್ದಾರೆ ತಜ್ಞರು.

ಕೊರೋನಾ ವೈರಸ್ ನಿಂದ ಲಾಕ್ ಡೌನ್ ಘೋಷಣೆಯಾಗಿರುವ ಪರಿಣಾಮ, ಹಲವು ಉದ್ದಿಮೆ, ಉದ್ಯೋಗಳ ಮೇಲೆ ತಟ್ಟುತ್ತಿದ್ದು ಟೆಕ್ಸ್ ಟೈಲ್ಸ್, ಸಿದ್ಧ ಉಡುಪು ಕ್ಷೇತ್ರದ ಲಕ್ಷಾಂತರ ಉದ್ಯೋಗಗಳಿಗೆ ಕುತ್ತು ಬರುವ ಎಚ್ಚರಿಕೆ ನೀಡಿದ್ದಾರೆ ತಜ್ಞರು.
 
ವಿದೇಶಗಳಿಂದ, ಪ್ರಮುಖವಾಗಿ ಅಮೆರಿಕ, ಯುರೋಪ್ ನಿಂದ ಬರುತ್ತಿದ್ದ ಆರ್ಡರ್ ಗಳು ಲಾಕ್ ಡೌನ್ ನಿಂದ ರದ್ದುಗೊಂಡಿದೆ. ಇತ್ತ ಲಾಕ್ ಡೌ ನಿಂದ ಕಾರ್ಮಿಕರೂ ನಗರ ಪ್ರದೇಶಗಳಿಂದ ವಾಪಸ್ ತಮ್ಮ ಊರುಗಳಿಗೆ ತೆರಳಿರಿವುದು ಉದ್ಯಮ ಮತ್ತಷ್ಟು ಕುಂಠಿತಗೊಂಡಿದೆ. 

ಕಾರ್ಖಾನೆಗಳು ಮುಚ್ಚಿರುವ ಪರಿಣಾಮ ಕಾರ್ಮಿಕರು ವಾಪಸ್ಸಾಗುತ್ತಿದ್ದು, ಬೇಡಿಕೆಯೂ ಕುಸಿಯುತ್ತದೆ. ಪರಿಸ್ಥಿತಿ ನಿಭಾಯಿಸುವುದಕ್ಕೆ ಕೇಂದ್ರ ಸರ್ಕಾರ ಶೀಘ್ರವೇ ಪ್ಯಾಕೇಜ್ ಘೋಷಣೆ ಮಾಡದೇ ಇದ್ದರೆ ಲಕ್ಷಾಂತರ ಉದ್ಯೋಗಗಳಿಗೆ ಕುತ್ತು ಉಂಟಾಗಲಿದೆ ಎಂದು ಟೆಕ್ಸ್ ಟೈಲ್ಸ್ ರಫ್ತುದಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಶೇ.70 ರಷ್ಟು ಟೆಕ್ಸ್ ಟೈಲ್ಸ್ ಯುನಿಟ್ ಗಳು ಸಣ್ಣ, ಅತಿ ಸಣ್ಣ, ಮಧ್ಯಮ ಕೈಗಾರಿಕೆಗಳ ವ್ಯಾಪ್ತಿಗೆ ಬರಲಿದೆ. ಕಾರ್ಮಿಕ ವೆಚ್ಚವೇ ಉತ್ಪನ್ನ ವೆಚ್ಚಗಳ ಬಹುಪಾಲನ್ನು ಆವರಿಸಿವೆ ಎನ್ನುತ್ತಾರೆ ತಜ್ಞರು.  ಸಿದ್ಧ ಉಡುಪು ರಫ್ತು ಉತ್ತೇಜನಾ ಮಂಡಳಿ (ಎಇಪಿಸಿ)ಯ ಅಧ್ಯಕ್ಷ ಎ ಶಕ್ತಿವೇಲ್ ಈ ಬಗ್ಗೆ ಮಾತನಾಡಿದ್ದು ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆದಿದ್ದಾರೆ. "ಒಂದು ವೇಳೆ ಸಿದ್ಧ ಉಡುಪು ಕ್ಷೇತ್ರಕ್ಕೆ  ಕೇಂದ್ರ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡದೇ ಇದ್ದಲ್ಲಿ 12.9 ಮಿಲಿಯನ್ ಜನರಿಗೆ ಉದ್ಯೋಗ ನೀಡಿರುವ ಉದ್ಯಮ ನಿಧಾನಗತಿಯಲ್ಲಿ ಸಮಸ್ಯೆಯಲ್ಲಿ ಸಿಲುಕಿಕೊಳ್ಳಲಿದೆ"

ಸಿದ್ಧ ಉಡುಪು ಇಂಡಸ್ಟ್ರಿ ಸಹ ಸೀಸನಲ್ ಉದ್ಯಮವಾಗಿದ್ದು, ಸಿದ್ಧ ಉಡುಪುಲು ಕಾಲಕ್ಕೆ ತಕ್ಕಂತೆ ನಿರ್ದಿಷ್ಟ ವಿನ್ಯಾಸ, ನಿರ್ದಿಷ್ಟ ಫ್ಯಾಷನ್ ನ್ನು ಹೊಂದಿರುತ್ತವೆ, ಇವುಗಳ ರಫ್ತನ್ನು ರದ್ದುಮಾಡಿದರೆ ಮುಂದಿನ ವರ್ಷಕ್ಕೆ ಅವುಗಳಿಗೆ ಬೆಲೆ ಇರುವುದಿಲ್ಲ ಎಂದು ಎ ಶಕ್ತಿವೇಲ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!