ದೇಶ

ಆರೋಗ್ಯ ಸಿಬ್ಬಂದಿಗಳ ವಿರುದ್ಧ ಕೆಟ್ಟದಾಗಿ ನಡೆದುಕೊಳ್ಳುವ ತಬ್ಲೀಘಿ ಜಮಾತ್ ಸದಸ್ಯರನ್ನು ಗುಂಡಿಕ್ಕಿ ಕೊಲ್ಲಬೇಕು: ರಾಜ್ ಠಾಕ್ರೆ 

Nagaraja AB

ಮುಂಬೈ: ಕ್ವಾರಂಟೈನ್ ವೇಳೆಯಲ್ಲಿ ಮಹಿಳಾ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಅಶಿಸ್ತಿನಿಂದ ವರ್ತಿಸಿರುವ ಹಾಗೂ ಕೆಲ ಪಿತೂರಿಯಲ್ಲಿ ತೊಡಗಿರುವ ತಬ್ಲೀಘಿ ಜಮಾತ್ ಸದಸ್ಯರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಇಂತಹ ವ್ಯಕ್ತಿಗಳಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ

ಜನರಲ್ಲಿ ನಂಬಿಕೆಯ ಪ್ರಜ್ಞೆ ಬರಲು  ಇಂತಹ ವ್ಯಕ್ತಿಗಳು ಹಲ್ಲೆ ನಡೆಸಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವಂತೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಒತ್ತಾಯಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ದೀಪ, ಮೇಣದ ಬತ್ತಿ ಹಚ್ಚುವುದರ ಕುರಿತು ಮಾತನಾಡುವುದಕ್ಕಿಂತಲೂ  ಕೊರೋನಾವೈರಸ್ ವಿರುದ್ಧದ ಹೋರಾಟದಲ್ಲಿ ದೇಶ ಎತ್ತ ಸಾಗುತ್ತಿದೆ, ಪ್ರಸಕ್ತ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ  ಮಾತನಾಡಿದ್ದರೆ ಜನರು ತೃಪ್ತಿ ಪಟ್ಟುಕೊಳ್ಳುತ್ತಿದ್ದರು ಎಂದು ಠಾಜ್ ಠಾಕ್ರೆ ಹೇಳಿದ್ದಾರೆ. 

ತಬ್ಲೀಘಿ ಜಮಾತ್ ಸದಸ್ಯರು ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ನಡೆಸಿರುವ ದೌರ್ಜನ್ಯ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ ಠಾಕ್ರೆ, ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸಪಡುತ್ತಿರುವ ಪೊಲೀಸರನ್ನು ನಿಂಧಿಸಿ, ಅವರ ಮೇಲೆ ಹಲ್ಲೆ ನಡೆಸುವ ವಿಡಿಯೋಗಳನ್ನು ನೋಡಬಹುದಾಗಿದೆ. ದೆಹಲಿಯ ಮಾರ್ಕಜ್ ನಲ್ಲಿ ಸಭೆ ನಡೆಸಿದ ಇಂತಹ ಜನರನ್ನು ಗುಂಡಿಕ್ಕಿ ಕೊಲ್ಲಬೇಕು, ಅವರಿಗೆ ಏಕೆ ಚಿಕಿತ್ಸೆ ನೀಡಬೇಕು, ಪ್ರತ್ಯೇಕ ಸೆಕ್ಷನ್ ರಚಿಸಿ ಅವರಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸಬೇಕು ಎಂದರು.

ಜನರು, ತರಕಾರಿಗಳ ಮೇಲೆ ಉಗುಳುವುದು, ನರ್ಸ್ ಗಳ ಮುಂದೆ ನಗ್ನವಾಗಿರುವುದು ಮತ್ತಿತರ ಪಿತೂರಿ ನಡೆಸುತ್ತಿರುವ ತಬ್ಲೀಘಿ ಜಮಾತ್ ಸದಸ್ಯರಿಗೆ ದೇಶಕ್ಕಿಂತ ಧರ್ಮವೇ ದೊಡ್ಡದು ಎನ್ನಿಸುತ್ತಿದೆ. ಇದು ಧರ್ಮದ ಬಗ್ಗೆಯೂ ಮಾತನಾಡುವ ಸಂದರ್ಭವಲ್ಲ, ಆದರೆ, ಹಲ್ಲೆಯಂತಹ ಕೆಲಸದಲ್ಲಿ ತೊಡಗಿರುವ ಮುಸ್ಲಿ ಸಮುದಾಯದ ಕೆಲವರು ಲಾಕ್ ಡೌನ್ ಕೆಲ ದಿನಗಳವರೆಗೆ ಮಾತ್ರ ಇರಲಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ ಎಂದು ರಾಜ್ ಠಾಕ್ರೆ ಹೇಳಿದ್ದಾರೆ. 

SCROLL FOR NEXT