ಸೋನಿಯಾ ಗಾಂಧಿ 
ದೇಶ

ಕೊರೋನಾ ವಿರುದ್ಧ ಸಮರಕ್ಕಾಗಿ ಹಣ ಉಳಿತಾಯ-ಸರ್ಕಾರಕ್ಕೆ 5 ಅಂಶಗಳ ಸಲಹೆ ನೀಡಿದ ಸೋನಿಯಾ ಗಾಂಧಿ

ಕೊರೋನಾವೈರಸ್  ವಿರುದ್ಧದ ಹೋರಾಟಕ್ಕಾಗಿ ಹಣವನ್ನು ಕಾಪಿಡಲು ಐದು ಕ್ರಮಗಳನ್ನು ಸೂಚಿಸಿರುವ  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ, ಇದರಲ್ಲಿ ಸರ್ಕಾರ ಹಾಗೂ ಸಾರ್ವಜನಿಕ ವಲಯದ ಘಟಕಗಳು  ಎರಡು ವರ್ಷಗಳ ಕಾಲ ಮಾಧ್ಯಮ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸಿ ನಗರಗಳನ್ನು ಸುಂದರಗೊಳಿಸುವ ಯೋಜನೆಯಾಗಿರುವ

ನವದೆಹಲಿ: ಕೊರೋನಾವೈರಸ್  ವಿರುದ್ಧದ ಹೋರಾಟಕ್ಕಾಗಿ ಹಣವನ್ನು ಕಾಪಿಡಲು ಐದು ಕ್ರಮಗಳನ್ನು ಸೂಚಿಸಿರುವ  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ, ಇದರಲ್ಲಿ ಸರ್ಕಾರ ಹಾಗೂ ಸಾರ್ವಜನಿಕ ವಲಯದ ಘಟಕಗಳು  ಎರಡು ವರ್ಷಗಳ ಕಾಲ ಮಾಧ್ಯಮ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸಿ ನಗರಗಳನ್ನು ಸುಂದರಗೊಳಿಸುವ ಯೋಜನೆಯಾಗಿರುವ ಸೆಂಟ್ರಲ್ ವಿಸ್ತಾ ಬ್ಯೂಟಿಫಿಕೇಷನ್ ಪ್ಲಾನ್ ಗಳನ್ನು ಸ್ಥಗಿತಗೊಳಿಸಬೇಕೆಂದು ಸೂಚಿಸಿದ್ದಾರೆ.

ಸೋಮವಾರ  ಸೋನಿಯಾ ಗಾಂಧಿ ಸೇರಿದಂತೆ  ಹಲವಾರು ವಿರೋಧ ಪಕ್ಷದ ಮುಖಂಡರ ಜತೆ ಪ್ರಧಾನಿ ಮೋದಿ ಸಂವಹನ ನಡೆಸಿದ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಈ ಸಲಹೆ ನೀಡಲಾಗಿದೆ.

ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ ಸೋನಿಯಾ ಭಾರತ ಸರ್ಕಾರಕ್ಕೆ ಖರ್ಚು ಉಳಿಯಲು  ಬಜೆಟ್‌ನಲ್ಲಿ (ಸಂಬಳ, ಪಿಂಚಣಿ ಮತ್ತು ಕೇಂದ್ರ ವಲಯದ ಯೋಜನೆಗಳನ್ನು ಹೊರತುಪಡಿಸಿ) ಶೇಕಡಾ 30 ರಷ್ಟು ಅನುಪಾತದಲ್ಲಿ ಕಡಿತಗೊಳಿಸುವಂತೆ ಆದೇಶಿಸಿದ್ದಾರೆ. ರಾಷ್ಟ್ರಪತಿ, ರು, ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯ ಸಚಿವರು ಮತ್ತು ಅಧಿಕಾರಿಗಳ ಎಲ್ಲಾ ವಿದೇಶಿ ಭೇಟಿಗಳನ್ನು ತಡೆಹಿಡಿಯಬೇಕು ಎಂದು ಅವರು ಸೂಚಿಸಿದ್ದಾರೆ.

ದಕ್ಷತೆ, ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಖಚಿತಪಡಿಸಿಕೊಳ್ಳಲು  'ಪಿಎಂ ಕೇರ್ಸ್' ನಿಧಿಯಡಿಯಲ್ಲಿರುವ ಎಲ್ಲಾ ಹಣವನ್ನು 'ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ' ವರ್ಗಾಯಿಸಲು ಕಾಂಗ್ರೆಸ್ ಮುಖ್ಯಸ್ಥರು ಕರೆ ನೀಡಿದರು.

ಕೊರೋನಾವೈರಸ್ ವಿರುದ್ಧದ ಹೋರಾಟಕ್ಕೆ  ಮೀಸಲಾಗಿರುವ ಹಣವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸಮಯವಿದೆ ಎಂದಿರುವ ಸೋನಿಯಾ ಗಾಂಧಿ , "ಮಾಧ್ಯಮ ಜಾಹೀರಾತುಗಳಾದ ಟೆಲಿವಿಷನ್, ಪ್ರಿಂಟ್ ಮತ್ತು ಆನ್‌ಲೈನ್ ಮೇಲೆ ಸಂಪೂರ್ಣ ನಿಷೇಧ ಹೇರಿ " ಎಂದು ಸೂಚಿಸಿದ್ದಾರೆ. ಸರ್ಕಾರ ಈ ನಿಷೇಧವನ್ನು ಎರಡು ವರ್ಷಗಳ ವರೆಗೆ ವಿಧಿಸಿಕೊಳ್ಲಬೇಕು ಎಂದು ಅವರು ಸೂಚಿಸಿದ್ದಾರೆ.

20,000 ಕೋಟಿ ರೂ.ಗಳ ಸೆಂಟ್ರಲ್ ವಿಸ್ಟಾ ಬ್ಯೂಟಿಫಿಕೇಷನ್ಸ್ ಯೋಜನೆಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಗಾಂಧಿ ಪ್ರಧಾನ ಮಂತ್ರಿಗೆ ಕರೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT