ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ 
ದೇಶ

ಕೊರೋನಾವೈರಸ್ ಹಬ್ಬಲು ಕಾರಣವಾದ ತಬ್ಲಿಘಿ ಜಮಾತ್ ನಿಷೇಧಕ್ಕೆ ಕೋರಿ ಸಿಜೆಐಗೆ ಪತ್ರ

ದೇಶಾದ್ಯಂತ ಕೊರೋನಾವೈರಸ್ ವ್ಯಾಪಿಸಲು ಪ್ರಮುಖ ಕಾರಣವಾಗಿರುವ ತಬ್ಲಿಘಿ ಜಮಾತ್  ಮತ್ತು ಅದರ ಎಲ್ಲಾ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ನಿರ್ದೇಶನ ಕೋರಿ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರಿಗೆ ವ್ಯಕ್ತಿಯೊಬ್ಬರು ಪತ್ರ ಬರೆದಿದ್ದಾರೆ. 

ನವದೆಹಲಿ: ದೇಶಾದ್ಯಂತ ಕೊರೋನಾವೈರಸ್ ವ್ಯಾಪಿಸಲು ಪ್ರಮುಖ ಕಾರಣವಾಗಿರುವ ತಬ್ಲಿಘಿ ಜಮಾತ್  ಮತ್ತು ಅದರ ಎಲ್ಲಾ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಷೇಧ ಹೇರಲು ನಿರ್ದೇಶನ ಕೋರಿ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರಿಗೆ ವ್ಯಕ್ತಿಯೊಬ್ಬರು ಪತ್ರ ಬರೆದಿದ್ದಾರೆ. 

ಹಮ್ ಹಿಂದೂ ಎಂಬ ಸಂಘಟನೆಯ  ಸಂಸ್ಥಾಪಕ ಅಜಯ್ ಗೌತಮ್ ಎನ್ನುವವರು ಈ ಪತ್ರ ಬರೆದಿದ್ದು ತನ್ನ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಬೇಕೆಂದು ಕೋರಲಾಗಿದೆ. ಮಾರ್ಚ್ 13-15ರ ನಡುವೆ ದೆಹಲಿಯ  ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲಿಘಿ ಜಮಾತ್ ನ ಸಭೆಯಲ್ಲಿ ವಿಶ್ವದಾದ್ಯಂತದ ಸಾವಿರಾರು  ಮುಸ್ಲಿಮ್ ಮತಪ್ರಚಾರಕರು ಭಾಗವಹಿಸಿದ್ದರು.ಕೊರೋನಾವೈರಸ್ ಹರಡುವಿಕೆ ದೇಶದಲ್ಲಿ ವ್ಯಾಪಕವಾಗಲು ಈ ಸಭೆ ಪ್ರಮುಖ ಕಾರಣವಾಗಿತ್ತು.

ತನ್ನ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಎಂದು ಪರಿಗಣಿಸುವಂತೆ ನ್ಯಾಯಾಲಯಕ್ಕೆ ಹೇಳಿರುವ ಗೌತಮ್ , ದೆಹಲಿ ಸರ್ಕಾರವು ಮಾರ್ಚ್ 12 ಮತ್ತು ಮಾರ್ಚ್ 16 ರಂದು 50 ಅಥವಾ ಅದಕ್ಕಿಂತ ಹೆಚ್ಚಿನ ಜನ ಸೇರುವ ಸಭೆಯನ್ನು ನಿಷೇಧಿಸಿ ಅದೇಶಿಸಿದ ಬಳಿಕವೂ  ಜನರು ನಿಜಾಮುದ್ದೀನ್ ಮರ್ಕಜ್ ನಲ್ಲಿ ಭಾಗವಹಿಸಿದ್ದಾರೆ."ಪ್ರವಾಸಿ ವೀಸಾದಲ್ಲಿ ಬಂದ 61 ದೇಶಗಳ ನೂರಾರು ವಿದೇಶಿಯರು ಭಾರತದಲ್ಲಿ ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಲು ಒಟ್ಟುಗೂಡಿದರು  ಕೊರೋನಾವೈರಸ್ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಹರಡಿರುವ ರಾಷ್ಟ್ರಗಳಿಂದ ನೂರಾರು ವಿದೇಶಿಯರು ಬಂದಿದ್ದರು ತಬ್ಲಿಘಿ ಸಂಸ್ಥೆ  ಈ ಮಾಹಿತಿಯನ್ನು ಸಂಬಂಧಪಟ್ಟ ಏಜೆನ್ಸಿಯಿಂದ ಮರೆಮಾಡಿದೆ " ಪತ್ರದಲ್ಲಿ ಹೇಳಲಾಗಿದೆ.

ಅರ್ಜಿಯು ಜಮಾತ್ ಕಾರ್ಯಕ್ರಮದಿಂದಾಗಿ ಭಾರತದ ಇಪ್ಪತ್ತೊಂದು ರಾಜ್ಯಗಳಲ್ಲಿ ಕೊರೋನಾವೈರಸ್ ಹರಡಿದೆ ಎಂದು ಆರೋಪಿಸಿದೆ.

ಪೊಲೀಸ್ ಮತ್ತು ವೈದ್ಯಕೀಯ ಅಧಿಕಾರಿಗಳು ಜಮಾತ್ ಸದಸ್ಯರನ್ನು ಮುಂದೆ ಬಂದು ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಕೇಳಿಕೊಂಡರೂ, “ಅವರಲ್ಲಿ ಯಾರೂ ಮುಂದೆ ಬರಲಿಲ್ಲ” ಮತ್ತು ಪೊಲೀಸ್ ದಾಳಿಯ ನಂತರವೇ “ಸೋಂಕಿತ” ವ್ಯಕ್ತಿಗಳು ಮರ್ಕಜ್ ಗೆ ಭೇಟಿ ಕೊಟ್ಟಿರುವುದುಕಂಡುಬಂದಿದೆ ಎಂದು ಗೌತಮ್ ಹೇಳಿದ್ದಾರೆ.  ನಿಜಾಮುದ್ದೀನ್‌ನಲ್ಲಿರುಮರ್ಕಜ್ ಕಟ್ಟಡವನ್ನು  “ಕಾನೂನುಬಾಹಿರ ರಚನೆ” ಎಂದು ಕೆಡವಲು ನ್ಯಾಯಾಲಯ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಹಮ್ ಹಿಂದೂ ಸಂಸ್ಥಾಪಕ ಹೇಳಿದ್ದಾರೆ.

ಜಮಾತ್ ಸದಸ್ಯರು ವೈದ್ಯರಿಗೆ ಸಮಸ್ಯೆಗಳನ್ನು ಒಡ್ಡುತ್ತಿದ್ದಾರೆ. ಮಸೀದಿಗಳಲ್ಲಿ ಅಡಗಿಕೊಂಡಿರುವುದು ಕಂಡುಬಂದಿದೆ "ವಿದೇಶಿ ಪ್ರಜೆಗಳು ಸೇರಿದಂತೆ ಸಾವಿರಾರು ಮಂದಿ ಸಭೆಯಲ್ಲಿ ಭಾಗವಹಿಸಿದ್ದವರನ್ನು ಮಸೀದಿ, ದರ್ಗಾಗಳಿಂದ ಪೋಲೀಸರು ಹುಡುಕಿ ಹುಡುಕಿ ಸ್ಥಳಾಂತರಿಸಿದ್ದಾರೆ.ಅವರು ಏಜೆನ್ಸಿಗಳು ನೀಡಿದ ಅನೇಕ ಸಲಹೆಗಳಬಳಿಕವೂ ತಮ್ಮನ್ನು ತಾವು ಮರೆಮಾಚಿಸಿಕೊಂಡಿದ್ದರು.ಮತ್ತು ಭಾರತದ ಪ್ರತಿಯೊಂದು ಭಾಗದಲ್ಲೂ ನಾಗರಿಕರಲ್ಲಿ ಈ ಸಾಂಕ್ರಾಮಿಕ ರೋಗವನ್ನು ಹರಡಿದ್ದಾರೆ. "ಇಡೀ ಸಭೆಯನ್ನು "ಯೋಜಿತ ಪಿತೂರಿ" ಎಂದು ಘೋಷಿಸಿ  ಸಾಂಕ್ರಾಮಿಕ ರೋಗವನ್ನು "ಜೈವಿಕ ಶಸ್ತ್ರಾಸ್ತ್ರ" ಎಂದು ಕರೆಯಬೇಕೆಂದು ಗೌತಮ್ ಬಯಸಿದ್ದಾರೆ.ಜಮಾತ್ ಸದಸ್ಯರು ಭಾರತ ಒಕ್ಕೂಟದ ವಿರುದ್ಧ ಯುದ್ಧ ಸಾರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಭಾರತದಲ್ಲಿ ಕೋವಿಡ್ ರಡುವಲ್ಲಿ ಜಮಾತ್ ಪಾತ್ರದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಗೌತಮ್ ಪ್ರಾರ್ಥಿಸಿದ್ದಾರೆ, ಜೊತೆಗೆ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಗಲಭೆಗಳಲ್ಲಿ ಅದರ ಪಾತ್ರದ ಬಗ್ಗೆ ಸಹ ತನಿಖೆ ಆಗಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

ನಿನ್ನೆ, ಜಾಮಿಯತ್ ಉಲೆಮಾ-ಎ-ಹಿಂದ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು ಮಾಧ್ಯಮಗಳು ನಿಜಾಮುದ್ದೀನ್  ಮರ್ಕಜ್ ಘಟನೆಯನ್ನು ಕೋಮುವಾದಿ ದೃಷ್ಟಿಕೋನದಿಂದ ಬಿತ್ತರಿಸುತ್ತಿವೆ ಎಂದು ಹೇಳಿದೆ, ಅಲ್ಲಿ ಸುಮಾರು 2,500 ವ್ಯಕ್ತಿಗಳು  ಕೊರೋನಾವೈರಸ್ ನಡುವೆಯೇ ಸಭೆ ಸೇರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT