ದೇಶ

ರಾಮಾಯಣ, ಮಹಾಭಾರತ ಮರು ಪ್ರಸಾರ; ಮತ್ತೊಂದು ದಾಖಲೆ ನಿರ್ಮಿಸಿದ ದೂರದರ್ಶನ!

Srinivas Rao BV

ನವದೆಹಲಿ: ಮನರಂಜನಾ ರಂಗದಲ್ಲಿ ಸಿನಿಮಾಗಳು, ಧಾರಾವಾಹಿಗಳು, ವಿಡಿಯೋ ಗೇಮ್ ಗಳು, ಅಮೆಜಾನ್  ಪ್ರೈಮ್... ಇತ್ಯಾದಿ ಬಹಳಷ್ಟು ಬಂದಿವೆ. ಆದರೂ, ನಮ್ಮ ಭಾರತೀಯರಿಗೆ ರಾಮಾಯಣ, ಮಹಾ ಭಾರತಗಳಂತ ಪೌರಾಣಿಕ ಕತೆಗಳ ಮೇಲೆ ಮಮಕಾರ ಮಾತ್ರ ಎಳ್ಳಷ್ಟೋ ಕಡಿಮೆಯಾಗಿಲ್ಲ. ಅಂದಿಗೂ, ಇಂದಿಗೂ  ಆದೇ  ಪ್ರೀತಿ, ಆದೇ ರೀತಿಯ ಭಕ್ತಿ ವಾತ್ಸಲ್ಯ, ಇದಕ್ಕೆ ನಿದರ್ಶನ ಈಗ ದೂರದರ್ಶನ ವಾಹಿನಿಗೆ ಲಭಿಸುತ್ತಿರುವ ರೇಟಿಂಗ್. ಪ್ರಸ್ತುತ ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ರಾಮಾಯಣ, ಮಹಾಭಾರತ ಧಾರಾವಾಹಿಗಳು.. ರೇಟಿಂಗ್ಸ್ ಧೂಳೆಬ್ಬಿಸಿ ಹೊಸ ದಾಖಲೆಯನ್ನೇ ನಿರ್ಮಿಸುತ್ತಿವೆ. 33 ವರ್ಷಗಳ ಹಿಂದೆ ಪ್ರಸಾರವಾಗಿದ್ದ ಈ ಧಾರಾವಾಹಿಗಳು. ಲಾಕ್ ಡೌನ್ ಪುಣ್ಯ ಎಂಬಂತೆ ಮತ್ತೆ  ಪ್ರಸಾರವಾಗುತ್ತಿವೆ.

ರಮಾನಂದ್ ಸಾಗರ್, ಬಿ.ಆರ್ ಛೋಪ್ರಾ ನಿರ್ದೇಶನದಲ್ಲಿ ಮೂಡಿಬಂದ ರಾಮಾಯಣ, ಮಹಾಭಾರತ  ಸೀರಿಯಲ್ ಗಳಿಗೆ ಭಾರಿ ಆದರಣೆ ಲಭಿಸುತ್ತಿದೆ. ದೂರದರ್ಶನದಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಗಳ ಮೊದಲ 4 ಎಪಿಸೋಡ್ ಗಳನ್ನು 170 ದಶಲಕ್ಷ ಮಂದಿ ವೀಕ್ಷಿಸಿಸಿದ್ದಾರೆ ಎಂದು ಬಾರ್ಕ್ ಇಂಡಿಯಾ ತಿಳಿಸಿದೆ.

ಈ ಪೈಕಿ ಭಾನುವಾರ ಪ್ರಸಾರವಾದ ಒಂದು ಎಪಿಸೋಡ್ ಅನ್ನು 5 ಕೋಟಿ ಪ್ರೇಕ್ಷಕರು ವೀಕ್ಷಿಸಿದ್ದಾರೆ. ದೇಶದ ಇತಿಹಾಸದಲ್ಲಿ ಸಿರಿಯಲ್ ಗಳಿಗೆ ಈ ಮಟ್ಟದ ಪ್ರೇಕ್ಷಕರ ವೀಕ್ಷಣೆ ಲಭಿಸಿರುವುದು ಇದೇ ಮೊದಲ ಬಾರಿಯಾಗಿದ್ದು,  ಇದರಿಂದಾಗಿ ಡಿ.ಡಿ ಚಾನಲ್ ವೀಕ್ಷಕರ ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಸರ್ಕಾರಿ ಸ್ವಾಮ್ಯದ ಚಾನಲ್ ದೂರದರ್ಶನ ಲಾಭದಲ್ಲಿ ಶೇ.650ರಷ್ಟು ಏರಿಕೆ ಕಂಡಿದೆ. ಇದಷ್ಟೇ ಅಲ್ಲದೇ 100 ಮಿಲಿಯನ್ ವೀಕ್ಷಕರನ್ನು ಹೊಂದುವ ಮೂಲಕ ನಂ.1 ಚಾನಲ್ ಎಂಬ ಹೊಸ ದಾಖಲೆಯನ್ನೂ ನಿರ್ಮಿಸಿದೆ. 

SCROLL FOR NEXT