ಭೋಪಾಲ್: 65 ವರ್ಷದ ಆಯುರ್ವೇದದ ವೈದ್ಯ ಕೋವಿಡ್-19 ಗೆ ಬಲಿಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ.
ಮೃತ ವೈದ್ಯ ಮಾಜಿ ಆರೋಗ್ಯ ಇಲಾಖೆಯ ಆಯುರ್ವೇದ ವೈದ್ಯರಾಗಿದ್ದರು. ಇಂಡೋರ್ ನಲ್ಲಿ ಕೊರೋನಾ ಸೋಂಕಿಗೆ ಬಲಿಯಾದ ನಾಲ್ವರ ಪೈಕಿ ಈ ಆಯುರ್ವೇದ ವೈದ್ಯರೂ ಒಬ್ಬರಾಗಿದ್ದಾರೆ.
ಮೃತರು ಇಂದೊರ್ ನ ಬ್ರಹ್ಮದೇವ್ ಕಾಲೋನಿಯ ನಿವಾಸಿಯಾಗಿದ್ದು ವಾರದ ಹಿಂದೆಯಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ಆಯುರ್ವೇದ ವೈದ್ಯರಿಕೆ ಯಾವುದೇ ಪ್ರಯಾಣದ ಹಿನ್ನೆಲೆ ಇರಲಿಲ್ಲ. ರೋಗಲಕ್ಷಣಗಳು ಕಾಣಿಸಿಕೊಳ್ಳದ ವ್ಯಕ್ತಿಗೆ ಚಿಕಿತ್ಸೆ ನೀಡಿರುವಾಗ ಕೊರೋನಾ ಸೋಂಕು ತಗುಲಿರುವ ಸಾಧ್ಯತೆಗಳಿವೆ.
ಕೊರೋನಾ ಸೋಂಕಿತರ ಸಾವಿನ ಕುರಿತು ಮಾಹಿತಿ ನೀಡಿರುವ ಇಂದೋರ್ ನ ಆರೋಗ್ಯ ಅಧಿಕಾರಿ ಡಾ. ಪ್ರವೀಣ್ ಏ.9 ರಂದು 62 ವರ್ಷದ ಜನರಲ್ ಫಿಸಿಷಿಯನ್ ಒಬ್ಬರು ಮೃತಪಟ್ಟಿದ್ದರು. ಏ.10 ರಂದು ನಾಲ್ವರು ಕೋವಿಡ್ ರೋಗಿಗಳು ಮೃತಪಟ್ಟಿದ್ದು ನಗರದಲ್ಲಿ ಸಾವಿನ ಸಂಖ್ಯೆ 27ಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.