ಪ್ರಧಾನಿ ಮೋದಿ ಹಾಗೂ ಸಚಿವರು 
ದೇಶ

ಸೋಮವಾರದಿಂದ ಕೇಂದ್ರ ಸಚಿವರು, ಸಚಿವಾಲಯದ ಹಿರಿಯ ಅಧಿಕಾರಿಗಳು ಕಚೇರಿಗೆ ಬರಬೇಕು

ಎಲ್ಲಾ ಕೇಂದ್ರ ಸಚಿವರು ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಸೋಮವಾರದಿಂದ ಕಚೇರಿಗೆ ಆಗಮಿಸಿ ಕೆಲಸ ಮಾಡಬೇಕು ಎಂದು ಶನಿವಾರ ಕೇಂದ್ರ ಸರ್ಕಾರ ಸೂಚಿಸಿದೆ.

ನವದೆಹಲಿ: ಎಲ್ಲಾ ಕೇಂದ್ರ ಸಚಿವರು ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಸೋಮವಾರದಿಂದ ಕಚೇರಿಗೆ ಆಗಮಿಸಿ ಕೆಲಸ ಮಾಡಬೇಕು ಎಂದು ಶನಿವಾರ ಕೇಂದ್ರ ಸರ್ಕಾರ ಸೂಚಿಸಿದೆ.

ಲಾಕ್ ಡೌನ್ ನಂತರದ ಆರ್ಥಿಕ ಸ್ಥಿತಿ ಸುಧಾರಿಸುವ ಕುರಿತು ಯೋಜನೆ ರೂಪಿಸಲು ಎಲ್ಲಾ ಸಚಿವರು ಮತ್ತು ಜಂಟಿ ಕಾರ್ಯದರ್ಶಿಗಳು ಮತ್ತು ಅದಕ್ಕು ಮೇಲ್ಪಟ್ಟ ಎಲ್ಲಾ ಅಧಿಕಾರಿಗಳು ಸೋಮವಾರದಿಂದ ಕಚೇರಿಗೆ ಆಗಮಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರದ ಎಲ್ಲಾ ಸಚಿವರು ಸೋಮವಾರದಿಂದ ಕಚೇರಿಗಳಿಗೆ ತೆರಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ್ದು, ಕೆಲಸ ಮಾಡುವ ವೇಳೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.

ಸರ್ಕಾರ ಕೊವಿಡ್-19 ಹಾಟ್ ಸ್ಪಾಟ್ ಗಳ ಬಗ್ಗೆ ಹೆಚ್ಚು ಗಮನಹರಿಸುತ್ತಿದೆ ಮತ್ತು ಲಾಕ್ ಡೌನ್ ಅಂತ್ಯವಾದ ನಂತರ ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಯತ್ನ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲ ಗೆಹ್ಲೋಟ್!

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!

ಕನಸು ಕೊನೆಗೂ ನನಸು: ಲಿಂಗ ಬದಲಿಸಿಕೊಂಡಿದ್ದ Anaya Bangarಗೆ ಕ್ರಿಕೆಟ್‌ಗೆ ಮರಳಲು ಗ್ರೀನ್ ಸಿಗ್ನಲ್!

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!