ದೇಶ

ವೈದ್ಯರ ಮೇಲೆ ಮಾಸ್ಕ್ ಎಸೆದು ಕೊರೋನಾ ರೋಗಿಯ ವಿರುದ್ಧ ಕೊಲೆ ಯತ್ನ ಕೇಸ್ ದಾಖಲು

Raghavendra Adiga

ಚೆನ್ನೈ: ಕೊರೋನಾವೈರಸ್ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬ ತಮ್ಮ ಮಾಸ್ಕ್ ತೆಗೆದು ವೈದ್ಯರ ಮೇಲೆ ಎಸೆದು ಅನುಚಿತ ವರ್ತನೆ ತೋರಿದ ಘಟನೆ ನಾಗಪಟ್ಟಣಂ ಜಿಲ್ಲೆಯಲ್ಲಿ ವರದಿಯಾಗಿದೆ. ರೋಗಿಯ ಈ ವರ್ತನೆ , ಆಸ್ಪತ್ರೆಯ ಸಿಬ್ಬಂದಿ ಮತ್ತು ಇತರ ರೋಗಿಗಳನ್ನು ಕೆರಳಿಸಿತು. ಇದೀಗ ಆತನ ವಿರುದ್ಧ ವೈದ್ಯರ ಕೊಲೆ ಯತ್ನ ಕೇಸ್ ದಾಖಲಾಗಿದೆ.

ವಾರ್ಡ್‌ನಲ್ಲಿ ಪ್ರವೇಶ ಪಡೆದಾಗಿನಿಂದಲೂ ಆ ವ್ಯಕ್ತಿ ವೈದ್ಯಕೀಯ ಸಿಬ್ಬಂದಿಗಳೊಡನೆ ಸಹಕರಿಸುತ್ತಿಲ್ಲ ಎನ್ನಲಾಗಿದ್ದು ಈ ನಡುವೆ ಜಿಲ್ಲೆಯ ಕಡಂಬಡಿಯಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿರುವ 65 ವರ್ಷದ ವೈದ್ಯರು ಮೂರು ವಾರಗಳ ಹಿಂದೆ ಅಮೆರಿಕದಿಂದ ಹಿಂದಿರುಗಿದ ನಂತರ ಕೋವಿಡ್ ಸೋಂಕಿಗೆ ತುತ್ತಾಗಿರುವುದಾಗಿ ವರದಿ ಬಂದಿದೆ. ವೈದ್ಯರಿಂದ ಚಿಕಿತ್ಸೆ ಪಡೆದ ಜನರು ಸ್ವಯಂಪ್ರೇರಣೆಯಿಂದ ಮುಂದೆ ಬಂದು ತಮ್ಮನ್ನು ವೈದ್ಯಕೀಯ ಪರೀಕ್ಷೆಗೆ ಒಳಗಾಗಿಸಿಕೊಳ್ಳಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಈ ಸಂಬಂಧ ಮಾಹಿತಿ ಪಡೆಯಲು ಜನರು 9751425002 ಮತ್ತು 9500493022 ಸಂಖ್ಯೆಗಳಿಗೆ ಕರೆ ಮಾಡಿ  ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಅದು ಹೇಳಿದೆ. ಮಹಾರಾಷ್ಟ್ರ ಮತ್ತು ದೆಹಲಿಯ ನಂತರ ದೇಶದಲ್ಲಿತಮಿಳುನಾಡಿನಲ್ಲಿ ಅತಿ ಹೆಚ್ಚು ಕೊರೋನಾ ಪ್ರಕರಣ ದಾಖಲಾಗಿದೆ. ಒಟ್ಟು 969 ಪ್ರಕರಣಗಳು ದೃ ಢಪಟ್ಟಿದ್ದು ಇದುವರೆಗೆ  11 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

SCROLL FOR NEXT