ದೇಶ

ಮುಂಬೈ: ಸಮುದ್ರದಲ್ಲಿ ದೋಣಿ ಮುಳುಗಿ ಮೂವರು ನಾಪತ್ತೆ

Raghavendra Adiga

ಮುಂಬೈ: ದೋಣೊಯೊಂದು ಮುಳುಗಿದ  ಪರಿಣಾಮ ಮೂವರು ನಾಪತ್ತೆಯಾಗಿರುವ ಘಟನೆ ಮುಂಬೈನ ಮಾಧ್ ಜೆಟ್ಟಿ ಬಳಿ ಬುಧವಾರ ಮುಂಜಾನೆ ನಡೆದಿದೆ.

ಮುಂಜಾನೆ 1.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೋಣಿ ಏಳು ಜನರನ್ನು ಹೊತ್ತೊಯ್ಯುತ್ತಿತ್ತು. ಸಮಸ್ಯೆ ಕುರಿತು ಸಂದೇಶ ರವಾನಿಸಿದ ಬಳಿಕ ಮೆರೈನ್ ಪೋಲಿಸ್ ಮತ್ತು ಅಗ್ನಿಶಾಮಕ ದಳವು ಸ್ಥಳಕ್ಕೆ ಧಾವಿಸಿ ನಾಲ್ವರನ್ನು ರಕ್ಷಿಸಿದೆ ಆದರೆ ಮೂವರು ಇನ್ನೂ ಕಾಣೆಯಾಗಿದ್ದಾರೆ ಎಂದು ಅವರು ಹೇಳಿದರು. 

SCROLL FOR NEXT