ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕೋವಿಡ್-19 ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಭಯ ಮೂಡಿಸುವಂತಿರುತ್ತದೆ: ಕೊರೋನಾ ಯೋಧರ ಮಾತು!

ಕೊರೋನಾ ವೈರಸ್ ದಾಂಗುಡಿ ಇಟ್ಟ ಮೇಲೆ ಹಲವರ ಜೀವನ ಶೈಲಿ, ಕೆಲಸಗಳಲ್ಲಿ ಊಹೆಗೂ ಮೀರಿದ ಬದಲಾವಣೆಗಳಾಗುತ್ತಿವೆ. ಸಾರ್ವಜನಿಕ ಕ್ಷೇತ್ರದಲ್ಲಿರುವವರು ದಿನನಿತ್ಯ ಸವಾಲುಗಳೊಂದಿಗೇ ಜೀವಿಸುತ್ತಿದ್ದಾರೆ.

ಕೋವಿಡ್-19 ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಭಯ ಮೂಡಿಸುವಂತಿರುತ್ತದೆ: ಕೊರೋನಾ ಸೈನಿಕನ ಮಾತುಗಳು!
Srinivas Rao BV
Updated On : 15 Apr 2020, 4:36 pm

ಚೆನ್ನೈ: ಕೊರೋನಾ ವೈರಸ್ ದಾಂಗುಡಿ ಇಟ್ಟ ಮೇಲೆ ಹಲವರ ಜೀವನ ಶೈಲಿ, ಕೆಲಸಗಳಲ್ಲಿ ಊಹೆಗೂ ಮೀರಿದ ಬದಲಾವಣೆಗಳಾಗುತ್ತಿವೆ. ಸಾರ್ವಜನಿಕ ಕ್ಷೇತ್ರದಲ್ಲಿರುವವರು ದಿನನಿತ್ಯ ಸವಾಲುಗಳೊಂದಿಗೇ ಜೀವಿಸುತ್ತಿದ್ದಾರೆ. 

ಇಂತಹದ್ದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಚೆನ್ನೈ ಕಾರ್ಪೊರೇಷನ್ ನ ನೈರ್ಮಲ್ಯ ಅಧಿಕಾರಿ. ಅವರ ಹೆಸರು ಸುಂದರ್ (ಹೆಸರು ಬದಲಾವಣೆ ಮಾಡಲಾಗಿದೆ). ಕೊರೋನಾ ಬಂದ ನಂತರ ಅವರ ಕರ್ತವ್ಯ ಪಾಲನೆ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕಳೆದ ತಿಂಗಳವರೆಗೂ ಸಂರಕ್ಷಣಾ ಕಾರ್ಯಾಚರಣೆಗಳ ಬಗ್ಗೆಯಷ್ಟೇ ಮೇಲ್ವಿಚಾರಣೆ ನಡೆಸಿದ್ದ ಸುಂದರ್, ಕೋವಿಡ್-19 ರಿಂದ ಸಾವನ್ನಪ್ಪಿರುವ ಇಬ್ಬರು ವ್ಯಕ್ತಿಗಳ ಅಂತ್ಯ ಸಂಸ್ಕಾರವನ್ನು ಖುದ್ದಾಗಿ ನೋಡಿದ್ದಾರೆ.   

ಕೋವಿಡ್-19 ರಿಂದ ಮೃತಪಟ್ಟ ಇಬ್ಬರು ರೋಗಿಗಳ ಅಂತ್ಯಸಂಸ್ಕಾರವನ್ನು ನೋಡಿದ್ದೇನೆ. ಸೋಂಕು ನಿವಾರಣೆ ಪ್ರಕ್ರಿಯೆಗಳ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ನೋಡಿಕೊಳ್ಳಬೇಕಾಗಿದ್ದರಿಂದ ಮೊದಲ ಬಾರಿಗೆ ಭಯ ಅಥವಾ ಮಾನಸಿಕ ಒತ್ತಡ ಉಂಟಾಗಲಿಲ್ಲ. ಎರಡನೇ ಬಾರಿ ಮತ್ತಷ್ಟು ಎಚ್ಚರದಿಂದ ಇದ್ದೆ ಎನ್ನುತ್ತಾರೆ ಸುಂದರ್. 

Advertisement

Advertisement

ಆಸ್ಪತ್ರೆಯ ಅಧಿಕಾರಿಗಳು ಮೃತರ ಬಗ್ಗೆ ಮಾಹಿತಿ ನೀಡುತ್ತಿದ್ದಂತೆಯೇ ಮೃತರ ಅಂತ್ಯಕ್ರಿಯೆ ನಡೆಸುವುದಕ್ಕಾಗಿ 8 ಅಡಿ ಆಳದಲ್ಲಿ ಸಮಾಧಿ ಸಿದ್ಧವಾಗಿರುವಂತೆ ನೋಡಿಕೊಳ್ಳಬೇಕಾಗಿತ್ತು. ಮೊದಲು ಸೋಂಕು ನಿವಾರಕಗಳನ್ನು ಸಿಂಪಡಿಸಲಾಗುತ್ತಿತ್ತು. ಪಾರ್ಥಿವ ಶರೀರವನ್ನು ಒಳಗೆ ಇಳಿಸಿದ ಕೂಡಲೇ ಅದರ ಮೇಲೆ ಬ್ಲೀಚಿಂಗ್ ಪೌಡರ್ ಹಾಕಲಾಗುತ್ತದೆ.  ಸಮಾಧಿ ಪೂರ್ಣಗೊಳ್ಳುವ ವೇಳೆಗೆ 3 ಪದರಗಳಲ್ಲಿ ಸೋಂಕು ನಾಶಕ ಸಿಂಪಡಿಸಲಾಗಿರುತ್ತದೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ಮತ್ತೊಮ್ಮೆ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗುತ್ತದೆ ಎಂದು ಕೋವಿಡ್-19 ರಿಂದ ಮೃತಪಟ್ಟಿರುವವರ ಅಂತ್ಯಕ್ರಿಯೆ ವಿವರಗಳನ್ನು ತಿಳಿಸಿದ್ದಾರೆ. 

ಹತ್ತಿರದ ಕುಟುಂಬ ಸದಸ್ಯರ ಅನುಪಸ್ಥಿತಿಯಲ್ಲಿ ನಾವು ಸಾಧ್ಯವಾದಷ್ಟೂ ಮಾಡಬಹುದಾಗಿರುವುದರ ಬಗ್ಗೆ ಗಮನ ಹರಿಸುತ್ತೇವೆ ಎನ್ನುತ್ತಾರೆ ಸುಂದರ್. "ಮನೆಗೆ ತೆರಳಿದ ನಂತರ ನನ್ನ ಪತ್ನಿ ಕೀಟಾಣು ನಾಶಕ ಮಿಶ್ರಿತ ನೀರನ್ನು ನೀಡುತ್ತಾರೆ. ಸ್ನಾನ ಮಾಡಿ ಮನೆ ಒಳಗೆ ಪ್ರವೇಶಿಸುತ್ತೇನೆ. 5-6 ತರಗತಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿದ್ದಾರೆ. ಮನೆಯಲ್ಲಿ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸುಂದರ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement