ದೇಶ

ಲಾಕ್ ಡೌನ್ ವೇಳೆ ಕಾರ್ಮಿಕರಿಗೆ ಮುಂಗಡ ನೀಡಲಿರುವ ಇಪಿಎಫ್ಓ

Lingaraj Badiger

ನವದೆಹಲಿ: ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ಕಾರ್ಮಿಕರಿಗೆ ನೆರವಾಗುವ ಉದ್ದೇಶದಿಂದ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) ಇಂತಹವರಿಗೆ ವಿಶೇಷ ಮುಂಗಡ ಹಣ ನೀಡುವ ಸೌಲಭ್ಯವನ್ನು ಆರಂಭಿಸಿದೆ. 

ಯುಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪ್ರಾದೇಶಿಕ ಪಿಎಫ್ ಆಯುಕ್ತ ಅಲೋಕ್ ಯಾದವ್, ಸಂಸ್ಥೆಯ ಕಚೇರಿಗಳು ಭಾಗಶಃ ತೆರೆದಿದ್ದು, ಚಂದಾದಾರರಿಗೆ ತಮ್ಮ ಭವಿಷ್ಯ ನಿಧಿಯಿಂದ ಸ್ವಲ್ಪ ಹಣ ಹಿಂಪಡೆಯಲು ಅವಕಾಶ ಕಲ್ಪಿಸಿದೆ.

ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಬಡ ಜನರಿಗೆ ವೈದ್ಯಕೀಯ ಸೌಲಭ್ಯಗಳು ದೊರೆತಂತಾಗುತ್ತವೆ. 

ಆಯುಕ್ತರ ಸಹಾಯಕ ಸಿಬ್ಬಂದಿ ಪಿಎಫ್ ಚಂದಾದಾರರ ಸಮಸ್ಯೆ ಬಗೆಹರಿಸುವಲ್ಲಿ ನಿರತರಾಗಿದ್ದಾರೆ.

SCROLL FOR NEXT