ದೇಶ

ಲಾಕ್ ಡೌನ್ ಬಳಿಕ ದೇಶದಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳು ಹೆಚ್ಚಳ, 587 ದೂರುಗಳ ಸ್ವೀಕರಿಸಿದ ಎನ್‌ಸಿಡಬ್ಲ್ಯೂ

ಕೊರೋನಾವೈರಸ್ ನಿರ್ಬಂಧಗಳ ಮಧ್ಯೆ ದೇಶಾದ್ಯಂತ ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳು ತೀವ್ರವಾಗಿ ಹೆಚ್ಚಾಗಿದೆ ಎಂದು , ರಾಷ್ಟ್ರೀಯ ಮಹಿಳಾ ಆಯೋಗವು ಹೇಳಿದೆ. ಆಯೋಗವು ಮಾರ್ಚ್ 23 ರಿಂದ ಏಪ್ರಿಲ್ 16 ರವರೆಗೆ 587 ದೂರುಗಳನ್ನು ಸ್ವೀಕರಿಸಿದೆ.  ಅದರಲ್ಲಿ 239 ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿವೆ.

ನವದೆಹಲಿ: ಕೊರೋನಾವೈರಸ್ ನಿರ್ಬಂಧಗಳ ಮಧ್ಯೆ ದೇಶಾದ್ಯಂತ ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳು ತೀವ್ರವಾಗಿ ಹೆಚ್ಚಾಗಿದೆ ಎಂದು , ರಾಷ್ಟ್ರೀಯ ಮಹಿಳಾ ಆಯೋಗವು ಹೇಳಿದೆ. ಆಯೋಗವು ಮಾರ್ಚ್ 23 ರಿಂದ ಏಪ್ರಿಲ್ 16 ರವರೆಗೆ 587 ದೂರುಗಳನ್ನು ಸ್ವೀಕರಿಸಿದೆ.  ಅದರಲ್ಲಿ 239 ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿವೆ.

ಎನ್‌ಸಿಡಬ್ಲ್ಯು ಹಂಚಿಕೊಂಡ ಮಾಹಿತಿಯ ಪ್ರಕಾರ, ಫೆಬ್ರವರಿ 27 ಮತ್ತು ಮಾರ್ಚ್ 22 ರ ನಡುವೆ 123 ಕೌಟುಂಬಿಕ ಹಿಂಸಾಚಾರ ಪ್ರಕರಣಗಳು ದಾಖಲಾಗಿದೆ.ಕಳೆದ 25 ದಿನಗಳಲ್ಲಿ ಆಯೋಗಕ್ಕೆ ಇಂತಹ 239 ದೂರುಗಳು ಬಂದಿವೆ.

ಎನ್‌ಸಿಡಬ್ಲ್ಯು ಅಧ್ಯಕ್ಷೆ ರೇಖಾ ಶರ್ಮಾ "ಕೊರೋನಾ ಲಾಕ್‌ಡೌನ್‌ ಹೆಣ್ಣುಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುವವರನ್ನು ಹಾಗೂ ಸಂತ್ರಸ್ತ ಹೆಣ್ಣುಮಕ್ಕಳನ್ನೂ ಒಟ್ಟಿಗೆ ಲಾಕ್ ಮಾಡಿದೆ" ಎಂದು ಹಿಂದೊಮ್ಮೆ ಹೇಳಿಕೆ ನೀಡಿದ್ದರು.

ಕೊರೋನಾ ಹರಡುವಿಕೆ ನಿಯಂತ್ರಿಸಲು ಮಾರ್ಚ್ 24 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದರು.

ಫೆಬ್ರವರಿ 27 ರಿಂದ ಮಾರ್ಚ್ 22 ರವರೆಗೆ ಮಹಿಳೆಯರಿಗೆ ಸಂಬಂಧಿಸಿದ ಒಟ್ಟು 396 ಅಪರಾಧಗಳು ಎನ್‌ಸಿಡಬ್ಲ್ಯೂ ಕಟಕಟೆಗೆ ಬಂದಿದೆ. ಮಾರ್ಚ್ 23 ರಿಂದ ಏಪ್ರಿಲ್ 16 ರವರೆಗೆ ಇಂತಹ 587 ದೂರುಗಳು ಬಂದಿವೆ ಎಂದು ಅಂಕಿ ಅಂಶಗಳು ತಿಳಿಸಿವೆ. ಹೆಚ್ಚಿನ ಸಂಖ್ಯೆಯ ದೂರುಗಳು ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿವೆ.

ಲಾಕ್ ಡೌನ್ ಸಮಯದಲ್ಲಿ ತುರ್ತು ಆಧಾರದ ಮೇಲೆ ಕೌಟುಂಬಿಕ ಹಿಂಸಾಚಾರವನ್ನು ವರದಿ ಮಾಡಲು ಎನ್‌ಸಿಡಬ್ಲ್ಯೂ ಏಪ್ರಿಲ್ 10 ರಂದು ವಾಟ್ಸಾಪ್ ಸಂಖ್ಯೆ - 72177135372 ಅನ್ನು ಪ್ರಾರಂಭಿಸಿತ್ತುಈ ದೂರುಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸಲು ಆಯೋಗವು ವಿಶೇಷ ತಂಡವನ್ನು ರಚಿಸಿತು.

ಈ ವಿಶೇಷ ವಾಟ್ಸಾಪ್ ಸಂಖ್ಯೆಯನ್ನು ಪ್ರಾರಂಭಿಸಿದಾಗಿನಿಂದ ಕೌಟುಂಬಿಕ ಹಿಂಸಾಚಾರವನ್ನು ವರದಿ ಮಾಡುವ ಒಟ್ಟು 40 ಸಂದೇಶಗಳನ್ನು ಸ್ವೀಕರಿಸಲಾಗಿದೆ ಎಂದು ಅಂಕಿ ಸಂಖ್ಯೆಗಳು ಉಲ್ಲೇಖಿಸಿದೆ.

ಸಂದೇಶಗಳನ್ನು ಮೊದಲು ಪರಿಶೀಲಿಸಲಾಗುತ್ತದೆ ಮತ್ತು ಲಾಕ್‌ಡೌನ್ ಮಧ್ಯೆ ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದವುಗಳನ್ನು ಆದ್ಯತೆಯ ಮೇರೆಗೆ ತೆಗೆದುಕೊಳ್ಳಲಾಗುತ್ತದೆ ತದನಂತರ ಆಯಾ ರಾಜ್ಯ ಪೊಲೀಸ್ ಮತ್ತು ಆಡಳಿತದ ಸಹಾಯದಿಂದ ಸಂತ್ರಸ್ತ ಮಹಿಳೆಯರಿಗೆ ತಕ್ಷಣದ ಭದ್ರತೆಯನ್ನು ಒದಗಿಸುವುದಾಗಿ ಎನ್‌ಸಿಡಬ್ಲ್ಯೂ ಹೇಳಿಕೆಯಲ್ಲಿ ತಿಳಿಸಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

SCROLL FOR NEXT