ದೇಶ

ಛತ್ತೀಸ್ ಗಢ: ಮಹಿಳೆ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದ ಯುವಕನ ಬಂಧನ!

Nagaraja AB

ರಾಯಪುರ: ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್ ಬುಕ್  ಖಾತೆ ತೆರೆದು  ಸಾಮಾಜಿಕ ಸೌಹಾರ್ದತೆ ಕೆಡಿಸುವ ಪ್ರಚೋದನಾಕಾರಿ ಹೇಳಿಕೆಯನ್ನು  ಪೋಸ್ಟ್ ಮಾಡುತ್ತಿದ್ದ 31 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಛತ್ತೀಸ್ ಗಢದಲ್ಲಿ ಇಂದು ಬಂಧಿಸಲಾಗಿದೆ

ನಿಶಾ ಜಿಂದಾಲ್  ಹೆಸರಿನ ನಕಲಿ ಖಾತೆಯಲ್ಲಿ ವ್ಯವಹಾರಸ್ಥರು, ಪತ್ರಕರ್ತರು, ಪೊಲೀಸರು ಸೇರಿದಂತೆ ಸುಮಾರು 10 ಸಾವಿರ ಫಾಲೋವರ್ಸ್ ಗಳು ಹಾಗೂ 4 ಸಾವಿರ ಸ್ನೇಹಿತರು ಇದ್ದಾರೆ. 

ನಕಲಿ ಖಾತೆ ತೆರೆದಿದ್ದ ರವಿ ಪೂಜಾರಿಯನ್ನು ಏಪ್ರಿಲ್ 17 ರಂದು ಕಬೀರ್ ನಗರದ ಆತನ ಮನೆಯಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದು ಪ್ರಭಾವಿ ಮಹಿಳೆಯ ಖಾತೆ ಎಂದು ತಿಳಿದಿದ್ದೆ. ಆದರೆ, ನಕಲಿ ಖಾತೆ ಎಂಬುದು ಬಹಿರಂಗವಾದ ನಂತರ ಶಾಕ್ ಆಗಿರುವುದಾಗಿ  33 ವರ್ಷದ ರಾಯಪುರ ಮೂಲದ ವ್ಯವಹಾರಸ್ಥರೊಬ್ಬರು ಹೇಳಿದ್ದಾರೆ. ಸಚಿವರು, ತನಿಖಾ ದಳದಳ ಮುಖ್ಯಸ್ಥರು, ವಿದೇಶಿ ನಿಯೋಗದೊಂದಿಗೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದಾಗಿ ಈ ಖಾತೆಯಲ್ಲಿ ಸಂದೇಶಗಳನ್ನು ಹಾಕಲಾಗುತಿತ್ತು ಎಂದು ಅವರು ತಿಳಿಸಿದ್ದಾರೆ. 

 ರವಿ ಪೂಜಾರಿಯ ಮೊಡಸ್  ಕಾರ್ಯಾಚರಣೆಯ ಸಂಪೂರ್ಣ ವಿವರಗಳನ್ನು ಕಲೆಹಾಕಿದ ನಂತರ ಆತನನ್ನು ಬಂಧಿಸಲಾಗಿದೆ ಎಂದು ಉರ್ಲಾ ಪ್ರದೇಶದ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಮಹೇಶ್ವರಿ ತಿಳಿಸಿದ್ದಾರೆ. 

2012ರಲ್ಲಿ ಪಾಕಿಸ್ತಾನದ ಮಾಡೆಲ್ ವೊಂದರ ಭಾವಚಿತ್ರ ಹಾಕಿ ನಿಶಾ ಜಿಂದಾಲ್ ಎಂಬ ಹೆಸರಿನಲ್ಲಿ  ನಕಲಿ ಖಾತೆಯನ್ನು ತೆರೆದಿದ್ದ ರವಿ ಪೂಜಾರಿ, ಸಾಮಾಜಿಕ ಸ್ವಾಸ್ಥ್ಯ ಕೆಡಿಸುವಂತಹ ಹೇಳಿಕೆಗಳನ್ನು ಪೋಸ್ಟ್ ಮಾಡುತ್ತಿದ್ದ ಎಂದು ಅವರು ಹೇಳಿದ್ದಾರೆ.

SCROLL FOR NEXT