ದೇಶ

ಒಡಿಸ್ಸಾ ಮೂಲದ ಮನೆ ಕೆಲಸದಾಕೆಯ ಅಂತ್ಯ ಸಂಸ್ಕಾರ ನೆರವೇರಿಸಿದ ಗೌತಮ್ ಗಂಭೀರ್

Shilpa D

ಜೈಪುರ: ಅನಾರೋಗ್ಯದಿಂದ ಸಾವನ್ನಪ್ಪಿದ ಮನೆಕೆಲಸದಾಕೆಯ ಅಂತ್ಯ ಸಂಸ್ಕಾರವನ್ನು ತಾವೇ ನಡೆಸಿದ ಕ್ರಿಕೆಟಿಗ ಮತ್ತು ರಾಜಕಾರಣಿ ಗೌತಮ್ ಗಂಭೀರ್ ಮಾನವೀಯತೆ ಮೆರೆದಿದ್ದಾರೆ.

ಕಳೆದ 7 ವರ್ಷಳಿಂದ ಸರಸ್ವತಿ ಪತ್ರ ನವದೆಹಲಿಯ ಗಂಭೀರ್ ನಿವಾಸದಲ್ಲಿ ಕೆಲಸ ಮಾಡುತ್ತಿದ್ದರು,  ಜೈಪುರ ನಿವಾಸಿಯಾದ ಆಕೆ ಮಧು ಮೇಹ ಮತ್ತು ರಕ್ತದೊತ್ತಡದಿಂದಾಗಿ ಏಪ್ರಿಲ್ 14 ರಂದು ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. 

ಚಿಕಿತ್ಸೆ ಫಲಿಸದೇ ಏಪ್ರಿಲ್ 21ರಂದು ಸಾವನ್ನಪ್ಪಿದ್ದರು. ಈ ವಿಷಯವನ್ನು ಗಂಭೀರ್ ಆಕೆಯ ಸಹೋದರಿಗೆ ತಿಳಿಸಿದ್ದರು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ದೆಹಲಿಗೆ ಬರಲಾಗಲಿಲ್ಲ ಎಂದು ಆಕೆಯ ಸಹೋದರಿ ಪ್ರಫುಲ್ಲಾ ಪತ್ರ ತಿಳಿಸಿದ್ದಾರೆ.

ದೆಹಲಿಯಿಂದ ಒಡಿಸ್ಸಾಗೆ ಶವ ತರಲು ಸಾಧ್ಯವಾಗದ ಕಾರಣ ನಾವು ಅಂತ್ಯ ಸಂಸ್ಕಾರವನ್ನು ಅಲ್ಲಿಯೇ ನೆರವೇರಿಸುವಂತೆ ಗಂಭೀರ್ ಅವರಲ್ಲಿ ಮನವಿ ಮಾಡಿಕೊಂಡೆವು ಇದಕ್ಕೆ ಸ್ಪಂದಿಸಿದ ಅವರು ಸರಸ್ವತಿ ಪತ್ರ ಅವರ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಈ ಸಂಬಂಧ ಟ್ಟಿಟ್ಟರ್ ನಲ್ಲಿ ಬರೆದುಕೊಂಡಿರುವ ಗಂಭೀರ್ , ಅವರು ನಮ್ಮ ಮನೆಯ ಸದಸ್ಯರಲ್ಲಿ ಒಬ್ಬರಂತೆ ಇದ್ದರು. ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು, ಅವರ ಅಂತ್ಯ ಸಂಸ್ಕಾರ ನೆರವೇರಿಸುವುದು ನನ್ನ ಕರ್ತವ್ಯ ಎಂದು ಹೇಳಿಕೊಂಡಿದ್ದಾರೆ.

SCROLL FOR NEXT