ತ್ರಿಪುರಾ'ಕೋವಿಡ್-19 ಮುಕ್ತ ರಾಜ್ಯ':ಅಧಿಕೃತ ಘೋಷಣೆ
ತ್ರಿಪುರಾದಲ್ಲಿ ಎರಡನೇ ಕೋವಿಡ್ -19 ಸೋಂಕಿತ ರೋಗಿಯನ್ನು ಇಲ್ಲಿನ ಜಿಬಿಪಿ ಆಸ್ಪತ್ರೆಯಿಂದ ಬಿಡುಗಡೆ ಮಾಡುವುದರೊಂದಿಗೆ ರಾಜ್ಯವನ್ನು ‘ಕೋವಿಡ್ ಮುಕ್ತ ರಾಜ್ಯ’ವೆಂದು ಶನಿವಾರ ಅಧಿಕೃತವಾಗಿ ಘೋಷಿಸಲಾಗಿದೆ
ಅಗರ್ತಲಾ: ತ್ರಿಪುರಾದಲ್ಲಿ ಎರಡನೇ ಕೋವಿಡ್ -19 ಸೋಂಕಿತ ರೋಗಿಯನ್ನು ಇಲ್ಲಿನ ಜಿಬಿಪಿ ಆಸ್ಪತ್ರೆಯಿಂದ ಬಿಡುಗಡೆ ಮಾಡುವುದರೊಂದಿಗೆ ರಾಜ್ಯವನ್ನು ‘ಕೋವಿಡ್ ಮುಕ್ತ ರಾಜ್ಯ’ವೆಂದು ಶನಿವಾರ ಅಧಿಕೃತವಾಗಿ ಘೋಷಿಸಲಾಗಿದೆ
ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದೆ ರೋಗಿಯನ್ನು ಸಂಪೂರ್ಣವಾಗಿ ಗುಣಪಡಿಸಲಾಗಿದೆ. ಆದರೆ ಪ್ರೋಟೋಕಾಲ್ ಪ್ರಕಾರ, ಕೋವಿಡ್ -19 ಸೋಂಕು ಇಲ್ಲದಿರುವ ಬಗ್ಗೆ ಮೂರು ಪರೀಕ್ಷಾ ವರದಿಗಳನ್ನು ಅಧಿಕಾರಿಗಳು ನಿರೀಕ್ಷಿಸುತ್ತಿದ್ದಾರೆ
ಅಂತಿಮ ಕೋವಿಡ್ -19 ಪರೀಕ್ಷೆಯನ್ನು ಇಂದು ಮಧ್ಯಾಹ್ನ ಮುಗಿಸಲಾಯಿತು.ತಕ್ಷಣ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಉತ್ತರ ತ್ರಿಪುರದ ಕಾಂಚನಪುರದಲ್ಲಿ 14 ದಿನಗಳ ಕಾಲ ಸಾಂಸ್ಥಿಕ ಸಂಪರ್ಕತಡೆಯಲ್ಲಿ ಇರಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಇಲ್ಲಿ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.