ದೇಶ

ಚೆನ್ನೈ: ಲಾಕ್ ಡೌನ್ ನಡುವೆ ಸಾಮೂಹಿಕ ಪ್ರಾರ್ಥನೆ, ಒಂದೇ ಕುಟುಂಬದ 15 ಮಂದಿಗೆ ಕೊರೋನಾ

Lingaraj Badiger

ಚೆನ್ನೈ: ಲಾಕ್ ಡೌನ್ ನಡುವೆಯೂ ಸಾಮೂಹಿಕ ಪ್ರಾರ್ಥನಾ ಸಭೆ ನಡೆಸಿದ ಚೆನ್ನೈನ ತಿರುವಿಕಾ ನಗರದ ಒಂದೇ ಕುಟುಂಬದ 15 ಮಂದಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈ ಮಹಾನಗರ ಪಾಲಿಕೆ ಅಧಿಕಾರಿಗಳ ಪ್ರಕಾರ, ಕೊವಿಡ್19 ಪಾಸಿಟಿವ್ ದೃಢಪಟ್ಟ ಈ 15 ಮಂದಿಯ ಪೈಕಿ ದಂಪತಿಗಳಿಬ್ಬರು ಪೌರ ಕಾರ್ಮಿಕರಾಗಿದ್ದು, ಎಲ್ಲರೂ 40 ವರ್ಷದೊಳಗಿನವರಾಗಿದ್ದಾರೆ.

ಸೋಂಕಿತ ಈ ಕುಟುಂಬದ 15 ಮಂದಿ ಮೂರು ಅಂತಸ್ತಿನ ಒಂದೇ ಕಟ್ಟಡದಲ್ಲಿ, ಬೇರೆ ಬೇರೆ ಮಹಡಿಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಇತ್ತೀಚಿಗೆ ನೆಲ ಮಹಡಿಯಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಎಲ್ಲರೂ ಭಾಗವಹಿಸಿದ್ದರು.

ಈ ಪ್ರಾರ್ಥನಾ ಸಭೆಯಲ್ಲಿ ಹೊರಗಡೆಯವರು ಭಾಗವಹಿಸಿದ್ದರಾ ಅಥವಾ ಇಲ್ಲವೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಒಂದೇ ಕುಟುಂಬದ 15 ಮಂದಿ ಸೇರಿದಂತೆ ತಿರುವಿಕಾರನಗರದ 25 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ.

SCROLL FOR NEXT