ದೇಶ

ಕೇಂದ್ರ ಸರ್ಕಾರಿ ನೌಕರರು ಆರೋಗ್ಯ ಸೇತು ಆ್ಯಪ್ ಬಳಸುವುದು ಕಡ್ಡಾಯ: ಸಿಬ್ಬಂದಿ ಸಚಿವಾಲಯ ಆದೇಶ

Raghavendra Adiga

ನವದೆಹಲಿ: ಕೇಂದ್ರ ಸರ್ಕಾರದ ಹೊರಗುತ್ತಿಗೆ ಸಿಬ್ಬಂದಿ ಸೇರಿದಂತೆ ತನ್ನ ಎಲ್ಲ ಸಿಬ್ಬಂದಿಗೆ ಆರೋಗ್ಯಸೆತು ಆ್ಯಪ್ ಅನ್ನು ಕಡ್ಡಾಯವಾಗಿ  ಬಳಸಲು ಭಾರತ ಸರ್ಕಾರ ಆದೇಶಿಸಿದೆ. ಸರ್ಕಾರ ಈ ನಿಟ್ಟಿನಲ್ಲಿ ತಕ್ಷಣ ಜಾರಿಗೆ ಬರುವಂತೆ ಆದೇಶ ಜಾರಿ ಮಾಡಿದೆ. ಸಿಬ್ಬಂದಿ ಸಚಿವಾಲಯ ಹೊರಡಿಸಿರುವ  ಜ್ಞಾಪನ ಪತ್ರ (ಮೆಮೊರ್ಯಾಂಡಂ)ನಲ್ಲಿ ಯಾವುದೇ ಸಿಬ್ಬಂದಿ ಕಚೇರಿಗೆ ತೆರಳುವ ಮೊದಲು, ಅವರು ಅಪ್ಲಿಕೇಶನ್‌ನಲ್ಲಿ ತಮ್ಮ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳಬೇಕು. ಅಪ್ಲಿಕೇಶನ್ ಸುರಕ್ಷಿತವೆಂದು ತೋರಿಸಿದಾಗ ಮಾತ್ರ ಕಚೇರಿಗೆ ತೆರಳಬೇಕು ಎಂದು ಹೇಳೀದೆ.

ಆದಾಗ್ಯೂ ಕೋವಿಡ್  ಸೋಂಕಿತ ವ್ಯಕ್ತಿಗೆ ಅಥವಾ ಸೋಂಕಿತ ವ್ಯಕ್ತಿಯೊಂದಿಗೆ ಇತ್ತೀಚಿನ ಸಂಪರ್ಕಕ್ಕೆ ಬಳಕೆದಾರ / ಉದ್ಯೋಗಿಯು ಬಂದರೆ, ಅವನ ಅಥವಾ ಅವಳ ಸ್ಥಳದ ಆಧಾರದ ಮೇಲೆ ಹೆಚ್ಚಿನ ಅಪಾಯವನ್ನು ಕುರಿತಂತೆ ಅಪ್ಲಿಕೇಶನ್  ಸಂದೇಶ ನೀಡಿದರೆ ಅಂತಹಾ ಸಿಬ್ಬಂದಿ 14 ದಿನಗಳವರೆಗೆ ಕ್ವಾರಂಟೈನ್ ನಲ್ಲಿರಬೇಕು.

ಆರೋಗ್ಯ ಸೆತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್‌ ಆಗಿದ್ದು, ನಾಗರಿಕರಿಗೆ ಕೋವಿಡ್ -19 ಸೋಂಕಿನ ಅಪಾಯವನ್ನು ಗುರುತಿಸಲು ಸಹಾಯ ಮಾಡುತ್ತದೆ. ಐದು ದಿನಗಳ ಹಿಂದೆ ಪ್ರಾರಂಭವಾದ ಈ ಅಪ್ಲಿಕೇಷನ್ 10 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗ ಗಳನ್ನು ಕಂಡಿದೆ.

ಅಪ್ಲಿಕೇಶನ್ ಗೂಗಲ್ ಪ್ಲೇ (ಆಂಡ್ರಾಯ್ಡ್ ಫೋನ್‌ಗಳಿಗಾಗಿ) ಮತ್ತು ಆಪಲ್ ಆಪ್ ಸ್ಟೋರ್ (ಐಒಎಸ್‌ಗಾಗಿ) ಎರಡರಲ್ಲೂ ಲಭ್ಯವಿದೆ. 10 ಭಾರತೀಯ ಭಾಷೆಗಳು ಹಾಗೂ ಇಂಗ್ಲಿಷ್‌ನಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ. ಪಾಸಿಟಿವ್ ಎಂದು ವರದಿಯಾದ ಯಾರೊಂದಿಗಾದರೂ ಅವನು / ಅವಳು ಸಂಪರ್ಕಕ್ಕೆ ಬಂದಲ್ಲಿ ಬಳಕೆದಾರರಿಗೆ ಮಾಹಿತಿ ನೀಡುವಂತೆ ಅಪ್ಲಿಕೇಷನ್ ರೂಪಿತವಾಗಿದೆ. ಟ್ರ್ಯಾಕಿಂಗ್ ಅನ್ನು ಬ್ಲೂಟೂತ್ ಮತ್ತು ಸಾಮಾಜಿಕ ಗ್ರಾಫ್ ಮೂಲಕ ಇದು ಕೆಲಸ ಮಾಡುತ್ತದೆ. 

SCROLL FOR NEXT