ದೇಶ

ದೆಹಲಿ: ಸಿಆರ್'ಪಿಎಫ್ ಬೆಟಾಲಿಯನ್ ಪಡೆಯ 46 ಯೋಧರಿಗೆ ಕೊರೋನಾ ಸೋಂಕು, ಮಹಾಮಾರಿಗೆ ಓರ್ವ ಯೋಧ ಬಲಿ

Manjula VN

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಸಿಆರ್'ಪಿಎಫ್ ಬೆಟಾಲಿಯನ್ ಪಡೆದ 46 ಯೋಧರಿಗೂ ಸೋಂಕು ತಟ್ಟಿದೆ. ಅಲ್ಲದೆ, ಮಹಾಮಾರಿಗೆ ಓರ್ವ ಯೋಧ ಬಲಿಯಾಗಿದ್ದಾರೆಂದು ಬುಧವಾರ ತಿಳಿದುಬಂದಿದೆ.

46 ಯೋಧರಲ್ಲಿ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇದೀಗ 1,000ಕ್ಕೂ ಹೆಚ್ಚು ಯೋಧರನ್ನು ಕ್ವಾರಂಟೈನ್ ನಲ್ಲಿರಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ದೆಹಲಿ ಮಯೂರ್ ವಿಹಾರದಲ್ಲಿರುವ ಸಿಆರ್'ಪಿಎಫ್ 31ನೇ ಬೆಟಾಲಿಯನ್ ಪಡೆಯಲ್ಲಿ ಕೆಲ ದಿನಗಳಿಂದ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 

ಸೋಂಕು ದೃಢಪಟ್ಟ ಯೋಧರಿಗೆ ಮಂಡ್ವಾಲಿಯಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತಷ್ಟು ಯೋಧರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಇದೀಗ ಮೃತಪಟ್ಟಿರುವ 55 ವರ್ಷದ  ಯೋಧರ ಕೆಲ ದಿನಗಳಿಂದ ಸಫ್ದರ್ಜುಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಏಪ್ರಿಲ್ 17 ರಂದು ಯೋಧನಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿತ್ತು. ಬಳಿಕ ಏಪ್ರಿಲ್ 21 ರಂದು ವೈರಸ್ ಇರುವುದಾಗಿ ದೃಢಪಟ್ಟಿದ್ದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

SCROLL FOR NEXT