ದೇಶ

ಕೊವಿಡ್-19: ಚೆನ್ನೈನಲ್ಲಿ 138 ಸೇರಿ ತಮಿಳುನಾಡಿನಲ್ಲಿ ಒಂದೇ ದಿನ 161 ಪ್ರಕರಣ ಪತ್ತೆ

Lingaraj Badiger

ಚೆನ್ನೈ: ತಮಿಳುನಾಡಿನಲ್ಲಿ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಗುರುವಾರ ಒಂದೇ ದಿನ
ಚೆನ್ನೈನಲ್ಲಿ 138 ಸೇರಿ ತಮಿಳುನಾಡಿನಾದ್ಯಂತ ಒಟ್ಟು 161 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ
ಸೋಂಕಿತರ ಸಂಖ್ಯೆ 2323ಕ್ಕೆ ಏರಿಕೆಯಾಗಿದೆ.

ತಮಿಳುನಾಡು ರಾಜಧಾನಿ ಚೆನ್ನೈ ನಗರದಲ್ಲಿಯೇ ಇಂದು ಬರೋಬ್ಬರಿ 138 ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೆ
ಒಂದೇ ದಿನ ಪತ್ತೆಯಾದ ಅತಿ ಹೆಚ್ಚು ಪ್ರಕರಣಗಳಾಗಿವೆ. ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 906ಕ್ಕೆ
ಏರಿಕೆಯಾಗಿದೆ.

ಕಳೆದ 24 ಗಂಟೆಯಲ್ಲಿ ದೇಶಾದ್ಯಂತ ಕೊರೋನಾಗೆ ಒಟ್ಟು 67 ಮಂದಿ ಬಲಿಯಾಗಿದ್ದು, ಇದರೊಂದಿಗೆ ಸಾವಿನ ಸಂಖ್ಯೆ
1075ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಒಟ್ಟು 1823 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ
ಸಂಖ್ಯೆ 33610ಕ್ಕೆ ಏರಿಕೆಯಾಗಿದೆ.

SCROLL FOR NEXT