ದೇಶ

ಲಾಕ್ ಡೌನ್ ವೇಳೆ ರೈಲ್ವೆಯಿಂದ 30 ಲಕ್ಷ ಜನರಿಗೆ ಊಟ ಪೂರೈಕೆ! 

Srinivas Rao BV

ಭಾರತೀಯ ರೈಲ್ವೆ ಇಲಾಖೆ ಲಾಕ್ ಡೌನ್ ಅವಧಿಯಲ್ಲಿ ಬರೊಬ್ಬರಿ 30 ಲಕ್ಷ ಜನರಿಗೆ ಊಟ ಪೂರೈಕೆ ಮಾಡಿದೆ. 

ಕೋವಿಡ್-19 ಲಾಕ್ ಡೌನ್ ಘೋಷಣೆಯಾದಾಗಿನಿಂದಲೂ ರೈಲ್ವೆ ಇಲಾಖೆ 30 ಲಕ್ಷ ಜನರಿಗೆ ಬಿಸಿಯಾಗಿ ತಯಾರಿಸಿದ ಊಟವನ್ನು ಉಚಿತವಾಗಿ ತಲುಪಿಸಿದೆ ಎಂದು ರೈಲ್ವೆ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. 

ರೈಲ್ವೆಯಿಂದ ವಿತರಣೆಯಾಗುತ್ತಿದ್ದ ಉಚಿತ ಊಟದ ಸಂಖ್ಯೆ ಏ.20 ರಂದು 20 ಲಕ್ಷ ತಲುಪಿತ್ತು. ಕಳೇದ 10 ದಿನಗಳಲ್ಲಿ 10 ಲಕ್ಷ ಊಟವನ್ನು ವಿತರಿಸಲಾಗಿದೆ. 

ಐಆರ್ ಸಿಟಿಸಿಯಿಂದ 17.17 ಲಕ್ಷ ಸಿದ್ಧಪಡಿಸಿದ ಊಟ, ಆರ್ ಪಿಎಫ್ ನಿಂದ 5.18 ಲಕ್ಷ. ರೈಲ್ವೆ ಇಲಾಖೆಯ ಜೊತೆಗೂಡಿ ಕೆಲಸ ಮಾಡುತ್ತಿರುವ ಎನ್ ಜಿಒ ಗಳಿಂದ 5.60 ಲಕ್ಷ ಊಟ, ರೈಲ್ವೆಯ ವಾಣಿಜ್ಯ ಹಾಗೂ ಇತರ ವಿಭಾಗದಿಂದ 2.53 ಲಕ್ಷ ಊಟವನ್ನು ವಿತರಣೆ ಮಾಡಲಾಗಿದೆ.
 

SCROLL FOR NEXT