ಮನೋಜ್  ಸಿನ್ಹಾ 
ದೇಶ

ಜಮ್ಮು ಕಾಶ್ಮೀರದ ನೂತನ ಲೆಪ್ಟಿನೆಂಟ್ ಗವರ್ನರ್ ಆಗಿ ಮನೋಜ್ ಸಿನ್ಹಾ ನೇಮಕ

ಜಮ್ಮು ಕಾಶ್ಮೀರದ ನೂತನ ಲೆಪ್ಟಿನೆಂಟ್ ಗವರ್ನರ್ ಆಗಿ ಮಾಜಿ  ಕೇಂದ್ರ  ಸಚಿವ ಮನೋಜ್ ಸಿನ್ಹಾ ಅವರನ್ನು ನೇಮಿಸಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಆದೇಶ ಜಾರಿಗೊಳಿಸಿದ್ದಾರೆ. 

ನವದೆಹಲಿ:  ಜಮ್ಮು ಕಾಶ್ಮೀರದ ನೂತನ ಲೆಪ್ಟಿನೆಂಟ್ ಗವರ್ನರ್ ಆಗಿ ಮಾಜಿ ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರನ್ನು ನೇಮಿಸಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಆದೇಶ ಜಾರಿಗೊಳಿಸಿದ್ದಾರೆ. 

ಸಿನ್ಹಾ ಅವರು ಬಿಜೆಪಿ ವಲಯದಲ್ಲಿ ‘ವಿಕಾಸ್ ಪುರುಷ್’ ಎಂದು ಹೆಸರುವಾಸಿಯಾಗಿದ್ದಾರೆ. ೧೯೭೦ರಲ್ಕಿ ಸಿವಿಲ್ ಇಂಜನಿಯರ್ ಪೂರ್ಣಗೊಳಿಸಿ ಟಾಪರ್ ಆಗಿ ಹೊರಹೊಮ್ಮಿದ್ದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯ ಪದವಿ ಹೊಂದಿದ್ದಾರೆ.

೨೩ನೇ ವರ್ಷದಲ್ಲಿ ಎಬಿವಿಪಿ ಸೇರಿ.. ನಂತರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಬಿವಿಪಿಯ ಪ್ರಮುಖ ನಾಯಕರಾಗಿ ಹೊರ ಹೊಮ್ಮಿದ್ದರು, ಉತ್ತರ ಪ್ರದೇಶದ ಘಾಜಿಯಾಬಾದ್ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಸಂಸತ್ ಸದಸ್ಯರಾಗಿ ಚುನಾಯಿತರಾಗಿದ್ದರು.

ಆ ನಂತರ ನರೆಂದ್ರ ಮೋದಿ ಮಂತ್ರಿ ಮಂಡಲದಲ್ಲಿ ರೈಲ್ವೆ ಖಾತೆ ಸಹಾಯಕ ಸಚಿವರಾಗಿ ಸೇವೆಸಲ್ಲಿಸಿದ್ದರು. ೨೦೧೭ರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮೊದಲು ಬಿಂಬಿತಗೊಂಡಿದ್ದರು. ಆದರೆ ನಂತರದ ಪರಿಣಾಮಗಳ ಹಿನ್ನಲೆಯಲ್ಲಿ ಯೋಗಿ ಅದಿತ್ಯ ನಾಥ್ ಅಂತಿಮವಾಗಿ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡರು. ೧೯೯೮ ಘಾಜಿಯಾಬಾದ್ ಲೋಕಸಭಾ ಕ್ಷೇತ್ರದಿಂದ ನಿಂದ ಸೋಲು ಕಂಡಿದ್ದರು. ೧೯೯೯ರಲ್ಲಿ ಸಂಸದರಾಗಿ ಚುನಾಯಿತರಾಗಿದ್ದರು ನಂತರ ೨೦೧೪ರಲ್ಲೂ ಲೋಕಸಭೆಗೆ ಚುನಾಯಿತರಾಗಿದ್ದರು. 

೨೧೦೭ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಾರಾ ಪ್ರಚಾರಕರಾಗಿ ಅಲ್ಲಿನ ಚಿತ್ರಣವನ್ನೇ ಬದಲಿಸಿದ್ದರು. ಮನೋಜ್ ಸಿನ್ಹಾ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅತ್ಯಂತ ನಂಬಿಕಸ್ಥ ವ್ಯಕ್ತಿ ಎಂಬ ಹೆಸರು ಹೊಂದಿದ್ದಾರೆ. ಯಾವುದೇ ವಿವಾದವಿಲ್ಲದ ಸ್ವಚ್ಚ ವ್ಯಕ್ತಿತ್ವ ಹೊಂದಿರುವ ಸಿನ್ಹಾ, ‘ಮಿಸ್ಟರ್ ಕ್ಲೀನ್’ ಎಂದೂ, ಸದಾ ಜನರೊಂದಿಗೆ ಇರುತ್ತಾರೆ ಎಂಬ ಹೆಸರು ಹೊಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Israel -Gaza Conflict: ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್‌ ಒಪ್ಪಿಗೆ; ಶಾಂತಿ ಒಪ್ಪಂದದಲ್ಲಿ ಮಹತ್ವದ ಬೆಳವಣಿಗೆ, ಟ್ರಂಪ್ ನಡೆಗೆ ಪ್ರಧಾನಿ ಮೋದಿ ಸ್ವಾಗತ

'Greater Bengaluru Authority' ವ್ಯಾಪ್ತಿಯಲ್ಲಿ ಇಂದಿನಿಂದ ಜಾತಿಗಣತಿ: 17 ಸಾವಿರ ಸಿಬ್ಬಂದಿಗಳ ನಿಯೋಜನೆ, ಅನಾವಶ್ಯಕ ಗೈರಾದವರಿಗೆ ಕಠಿಣ ಕ್ರಮದ ಎಚ್ಚರಿಕೆ..!

ದಸರಾ ಪರೇಡ್​ನಲ್ಲಿ ಸಿಎಂ ಜತೆ ಸಚಿವ ಮಹದೇವಪ್ಪ ಮೊಮ್ಮಗನ ದರ್ಬಾರ್: ವಿವರಣೆ ಕೋರಿದ ಕಾಂಗ್ರೆಸ್ ಹೈ ಕಮಾಂಡ್!

ಬಿಹಾರ ಚುನಾವಣೆಗೋಸ್ಕರ GST ಸರಳೀಕರಣ: ಕೇಂದ್ರದ ನಿರ್ಧಾರದಿಂದ ರಾಜ್ಯಕ್ಕೆ 15,000 ಕೋಟಿ ರೂ. ನಷ್ಟ; ಸಿಎಂ ಸಿದ್ದರಾಮಯ್ಯ

ಬರವಣಿಗೆ ಮೂಲಕ ಸಂಪಾದಕೀಯದ ಘನತೆಯನ್ನು ಮತ್ತೊಂದು ಮಜಲಿಗೆ ಕೊಂಡೊಯ್ದವರು ಜಾರ್ಜ್: ಡಿ.ಕೆ. ಶಿವಕುಮಾರ್

SCROLL FOR NEXT