ದೇಶ

ಮನೆ ಕುಸಿತ, ನೀರು ನಿಲುಗಡೆ:2005ರ ಪ್ರವಾಹ ಪರಿಸ್ಥಿತಿಯನ್ನು ನೆನಪಿಸುತ್ತಿದೆ ಮುಂಬೈ ಮಹಾನಗರ

Sumana Upadhyaya

ಮುಂಬೈ: ವಾಣಿಜ್ಯ ನಗರಿ ಮುಂಬೈಯ ಮಹಾಮಳೆ, ತೀವ್ರವಾಗಿ ಬೀಸುತ್ತಿರುವ ಗಾಳಿ 2005ರ ಘಟನೆಯನ್ನು ನೆನಪು ಮಾಡುತ್ತಿದೆ. ಕಳೆದ ಬುಧವಾರ ಬೆಳಗ್ಗೆಯಿಂದ ಸಾಯಂಕಾಲದವರೆಗೆ ದಕ್ಷಿಣ ಮುಂಬೈಯಲ್ಲಿ 229.6 ಮಿಲಿ ಮೀಟರ್ ಮಳೆಯಾಗಿದ್ದು ಮುಂಬೈ ಉಪ ನಗರಗಳಲ್ಲಿ 65.8 ಮಿಲಿ ಮೀಟರ್ ಮಳೆ ಸುರಿದಿದೆ.

1999 ನಂತರ ಕಳೆದ ಒಂದು ದಿನದ ಲೆಕ್ಕಾಚಾರದಲ್ಲಿ ಬುಧವಾರ ದಕ್ಷಿಣ ಮುಂಬೈಯಲ್ಲಿ ದಾಖಲೆಯ ಮಳೆಯಾಗಿದೆ. 1998ರಲ್ಲಿ ಅತ್ಯಧಿಕ 261 ಮಿಲಿ ಮೀಟರ್ ಮಳೆಯಾಗಿತ್ತು. ಸ್ಥಳೀಯ ರೈಲುಗಳ ಸೇವೆಯನ್ನು ಕೇಂದ್ರ, ಪಶ್ಚಿಮ ಮತ್ತು ಬಂದರು ಪ್ರದೇಶಗಳಲ್ಲಿ ಅಧಿಕ ಮಳೆಯಿಂದಾಗಿ ರದ್ದುಪಡಿಸಲಾಗಿದೆ.

ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಆಶ್ರಯ ಪಡೆದುಕೊಂಡಿದ್ದ ಜನರನ್ನು ಸ್ಥಳೀಯ ಮಹಾನಗರ ಪಾಲಿಕೆಯ ಶಾಲೆಗಳಲ್ಲಿ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ. ಅನೇಕ ಸ್ಥಳಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಜನರನ್ನು ರಕ್ಷಿಸಲು ಮಹಾರಾಷ್ಟ್ರ ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ ಸೂಚಿಸಿದೆ.

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಮುಂಬೈ ಮತ್ತು ಅದರ ಉಪನಗರಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು ಗಂಟೆಗೆ 70ರಿಂದ 80 ಕಿಲೋ ಮೀಟರ್ ವೇಗದಲ್ಲಿ ಮಳೆ ಸುರಿಯಲಿದೆ.ತೀವ್ರ ಮಳೆ ಮತ್ತು ಅತೀವ ಗಾಳಿ, ನೀರು ನಿಲ್ಲುವಿಕೆಯಿಂದಾಗಿ ಹಿಂಡ್ ಮಾತಾ ಪರೇಲ್, ದಾದರ್ ಟಿಟಿ, ಎಂಐಇಎಸ್ ಕಾಲೇಜು, ಗೊಯೆಲ್ ದೇವಸ್ಥಾನ, ಜೆಜೆ ಬ್ರಿಜ್ಡ್, ಠಾಕೂರ್ ದಾವರ್, ಶೇಖ್ ಮಿಶ್ಟ್ರಿ ರಸ್ತೆ ಮತ್ತು ಬೆಂಡಿ ಬಾಜಾರ್ ನಲ್ಲಿ ನೀರು ನಿಲುಗಡೆಯ ವರದಿ ಬಂದಿದೆ.

ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. 6 ಮನೆಗಳು ಕುಸಿದು ಬಿದ್ದಿವೆ, 142 ಮರಗಳು ಧರೆಗುರುಳಿವೆ ಮತ್ತು 10 ಶಾರ್ಟ್ ಸರ್ಕ್ಯೂಟ್ ಘಟನೆಗಳು ವರದಿಯಾಗಿವೆ. ರಸ್ತೆ ಬದಿ ನಿಲ್ಲಿಸಿರುವ ಹಲವು ವಾಹನಗಳು ಜಖಂ ಆಗಿವೆ. ಮುಂಬೈ ಮತ್ತು ಅದರ ಉಪನಗರದ ಹಲವು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.

SCROLL FOR NEXT