ದೇಶ

ಶೇ.14 ರಷ್ಟು ಕೋವಿಡ್-19 ಸಾವುಗಳು ದೇಶದ 13 ಜಿಲ್ಲೆಗಳಿಂದ ವರದಿಯಾಗಿವೆ: ಕೇಂದ್ರ

Raghavendra Adiga

ನವದೆಹಲಿ: ಭಾರತದ ಸಕ್ರಿಯ ಕೋವಿಡ್ -19 ಪ್ರಕರಣಗಳಲ್ಲಿ ಸುಮಾರು 9% ರಷ್ಟು 8 ರಾಜ್ಯಗಳ 13 ಜಿಲ್ಲೆಗಳಲ್ಲಿದೆ, ಸೋಂಕಿನ  ಕಾರಣಕ್ಕಾಗಿರುವ ಒಟ್ಟೂ ಸಾವಿನಲ್ಲಿ 14% ನಷ್ಟು ಸಾವು 13 ಜಿಲ್ಲೆಗಳಿಂದ ವರದಿಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಲ್ಲದೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪ್ರಕರಣದ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ಅಗತ್ಯವನ್ನು ಸಹ ಸರ್ಕಾರ ಪುನರುಚ್ಚರಿಸಿದೆ.

ಈ ಜಿಲ್ಲೆಗಳಲ್ಲಿ ಅಸ್ಸಾಂನ ಕಾಮರೂಪ್ ಮೆಟ್ರೋ, ಬಿಹಾರದ ಪಾಟ್ನಾ, ಜಾರ್ಖಂಡ್‌ನ ರಾಂಚಿ; ಕೇರಳದ ಆಲಪ್ಪುಳ ಮತ್ತು ತಿರುವನಂತಪುರಂ, ಒಡಿಶಾದ ಗಂಜಾಂ, ಉತ್ತರ ಪ್ರದೇಶದ ಲಖನೌ,  ಪಶ್ಚಿಮ ಬಂಗಾಳದ 24 ಪರಗಣ  ಉತ್ತರ, ಹೂಗ್ಲಿ, ಹೌರಾ, ಕೋಲ್ಕತಾ ಮತ್ತು ಮಾಲ್ಡಾ ಹಾಗೂ ದೆಹಲಿ ಸೇರಿದೆ,.

ಭಾರತದಲ್ಲಿ ಶನಿವಾರ ಬೆಳಿಗ್ಗೆ ತನಕ ಒಟ್ಟು 20,88,611 ಕೋವಿಡ್ -19 ಪ್ರಕರಣಗಳು ವರದಿಯಾಗಿದೆ,  42,518  ಮಂದಿ ಸಾವಿಗೀಡಾಗಿದ್ದಾರೆ.  2.04%  ನಷ್ಟು ಸಿಎಫ್ಆರ್ ದಾಖಲಾಗಿದ್ದು . ದೇಶವು ಸತತ ಎರಡನೇ ದಿನ 60,000 ಕ್ಕೂ ಹೆಚ್ಚು ಪ್ರಕರಣಗಳಿಗೆ ಸಾಕ್ಷಿಯಾಗಿದೆ ಸಧ್ಯ ದೇಶದಲ್ಲಿ 6,19,088 ಸಕ್ರಿಯ ಕೋವಿಡ್ ಪ್ರಕರಣಗಳಿದೆ.

ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಕೇಸ್ ಲೋಡ್ ಮತ್ತು ಹೆಚ್ಚಿನ ಸಿಎಫ್‌ಆರ್ ಅನ್ನು ವರದಿ ಮಾಡುವ ರಾಜ್ಯಗಳೊಂದಿಗಿನ  ನಿಶ್ಚಿತವಾದ ಕಾರ್ಯಾಚರಣೆ ಭಾಗವಾಗಿ , ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು 13 ಜಿಲ್ಲೆಗಳ ಅಧಿಕಾರಿಗಳೊಡನೆ ಸಭೆ ನಡೆಸಿದ್ದಾರೆ. ಕಾಮರೂಪ್ ಮೆಟ್ರೋ, ಲಖನೌ , ತಿರುವನಂತಪುರಂ, ಮತ್ತು ಆಲಪ್ಪುಳಾ ಜಿಲ್ಲೆಗಳಲ್ಲಿ ದೈನಂದಿನ ಹೊಸ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ, ಎಂದು  ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೆಹಲಿಯ ಏಮ್ಸ್ ಆಯೋಜಿಸಿರುವ ಎರಡು ವಾರಗಳ  ವರ್ಚುವಲ್ ಸೆಷನ್‌ಗಳಲ್ಲಿ ತಮ್ಮ ಪ್ರೊಡಕ್ಷನ್ ಸೆಂಟರ್ ಗಳ  ವೈದ್ಯರು ಪಾಲ್ಗೊಳ್ಳುವಂತೆ ಕೇಂದ್ರವು ರಾಜ್ಯಗಳನ್ನು ಕೇಳಿದೆ, ಅಲ್ಲಿ ಐಸಿಯುಗಳಲ್ಲಿ ಕೋವಿಡ್ -19 ರೋಗಿಗಳ ಪರಿಣಾಮಕಾರಿ ಕ್ಲಿನಿಕಲ್ ನಿರ್ವಹಣೆಯ ಬಗ್ಗೆ ತಜ್ಞರ ತಂಡ ಮಾರ್ಗದರ್ಶನ ನೀಡುತ್ತದೆ. .
 

SCROLL FOR NEXT