ದೇಶ

ಸುಶಾಂತ್ ಪ್ರಕರಣ: ಮಾಧ್ಯಮಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ರಿಯಾ ಚಕ್ರವರ್ತಿ 

Srinivas Rao BV

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ಮಾಧ್ಯಮಗಳು ಅನುಚಿತವಾಗಿ ವರದಿ ಪ್ರಕಟಿಸುತ್ತಿದ್ದು, ತೀರ್ಪು ನೀಡುತ್ತಿವೆ ಎಂದು ಆಕ್ಷೇಪಿಸಿ ರಿಯಾ ಚಕ್ರವರ್ತಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ರಿಯಾ ಚಕ್ರವರ್ತಿ, ತಮ್ಮನ್ನು ಮಾಧ್ಯಮಗಳು ಅಪರಾಧಿಯೆಂಬಂತೆ ತೀರ್ಪು ನೀಡುವ ರೀತಿಯಲ್ಲಿ ವರದಿಗಳನ್ನು ಪ್ರಕಟಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಹಾರ ಚುನಾವಣೆಯ ಹಿನ್ನೆಲೆಯಲ್ಲಿ ತಾವು ಈ ಪ್ರಕರಣಕ್ಕೆ ಸಂಬಂಧಿಸಿದ ರಾಜಕೀಯಕ್ಕೆ ಬಲಿಪಶು ಆಗದಂತೆ ಗಮನ ಹರಿಸಬೇಕಿದೆ ಎಂದು ರಿಯಾ ಚಕ್ರವರ್ತಿ ಕೋರ್ಟ್ ಗೆ ಮನವಿ ಮಾಡಿದ್ದಾರೆ.

ಇದೇ ಕಾರಣಗಳಿಂದಾಗಿ ಬಿಹಾರ ಪೊಲೀಸರು ಈ ಪ್ರಕರಣವನ್ನು ಸಿಬಿಐ ಗೆ ವಹಿಸಿರುವುದೂ ಸಹ ಅಕ್ರಮವೇ ಎಂದು ಅರ್ಜಿಯಲ್ಲಿ ರಿಯಾ ಚಕ್ರವರ್ತಿ ಹೇಳಿದ್ದಾರೆ. ಆದರೆ ಕೋರ್ಟ್ ಸಿಬಿಐಗೆ ಈ ಪ್ರಕರಣವನ್ನು ವಹಿಸಿದರೆ ತಮ್ಮದೇನೂ ಆಕ್ಷೇಪವಿಲ್ಲ ಎಂದೂ ರಿಯಾ ಚಕ್ರವರ್ತಿ ಹೇಳಿದ್ದಾರೆ.

ಕಳೆದ 30 ದಿನಗಳಲ್ಲಿ ಸುಶಾಂತ್ ರೀತಿಯಲ್ಲಿ ಅಶುತೋಷ್ ಭಕ್ರೆ ಹಾಗೂ ಸಮೀರ್ ಶರ್ಮಾ ಅವರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಆದರೆ ಈ ಬಗ್ಗೆ ಮಾಧ್ಯಮಗಳು ತುಟಿ ಬಿಚ್ಚುತ್ತಿಲ್ಲ ಎಂಬ ಅಂಶವನ್ನೂ ಕೋರ್ಟ್ ಗೆ ರಿಯಾಚಕ್ರವರ್ತಿ ಮನವರಿಕೆ ಮಾಡಿಕೊಟ್ಟಿದ್ದಾರೆ. ರಿಯಾ ಸಲ್ಲಿಸಿರುವ ಅರ್ಜಿ ವಿಚಾರಣೆ ಮಂಗಳವಾರ ನಡೆಯುವ ಸಾಧ್ಯತೆ ಇದೆ.

SCROLL FOR NEXT