ದೇಶ

ಗುಡಿಸಲಿನಲ್ಲಿ ವಾಸಿಸುತ್ತಿರುವ ಹಾಲಿ,ಮಾಜಿ ಸಿಪಿಎಂ ಶಾಸಕ!ಟಿಎಂಸಿ ಸೇರ್ಪಡೆಗೆ ನಕಾರ

Nagaraja AB

ಕೊಲ್ಕತ್ತಾ: ಉತ್ತರ ಬಂಗಾಳದ ಧುಪ್ಗುರಿ ವಿಧಾನಸಭಾ ಕ್ಷೇತ್ರದ ಹಾಲಿ  ಮತ್ತು 70 ವರ್ಷದ ಮಾಜಿ ಸಿಪಿಎಂ ಶಾಸಕರೊಬ್ಬರು ಈ ಕಾಲದಲ್ಲೂ ಒಂದು ಮಣ್ಣಿನ  ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ.

ಆಡಳಿತರೂಢ ಪಕ್ಷ ತೃಣಮೂಲ ಕಾಂಗ್ರೆಸ್ ಸೇರುವಂತೆ ರಾಜಕೀಯ ಕಾರ್ಯತಂತ್ರಜ್ಞ ಪ್ರಶಾಂತ್ ಕಿಶೋರ್ ನೀಡಿರುವ ಆಫರ್ ತಿರಸ್ಕರಿಸಿದ್ದು,ಎಲ್ಲಾ ಕಮ್ಯೂನಿಸ್ಟ್ ಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಕ್ಷ ಸೋತ ನಂತರ ಕಿಶೋರ್ ತಂಡ, ಹಾಲಿ ಶಾಸಕ ಮಮತಾ ರಾಯ್ ಮತ್ತು  ಲಕ್ಷ್ಮೀ ಕಾಂತ ರಾಯ್ ಅವರ ಮನೆಗೆ ತೆರಳಿ ಟಿಎಂಸಿ ಸೇರುವಂತೆ ರೆಡ್ ಕಾರ್ಪೆಟ್ ಸ್ವಾಗತ ನೀಡಿದ್ದಾರೆ.

ಉತ್ತರ ಬಂಗಾಳ ವಲಯದಲ್ಲಿ ಪ್ರಾಮಾಣಿಕತೆಯಿಂದ ಗುರುತಿಸಿಕೊಂಡಿರುವ ರಾಯ್ ಅವರನ್ನು ಪಕ್ಷಕ್ಕೆ ಸೆಳೆಯಲು ಟಿಎಂಸಿ ಪ್ರಯತ್ನಿಸುತ್ತಿದ್ದು, ಕಳೆದ ಮಂಗಳವಾರ ಕಿಶೋರ್ ತಂಡದ ಇಬ್ಬರು ಪ್ರತಿನಿಧಿಗಳು ತಮ್ಮ ಮನೆಗೆ ಬಂದು ಪಕ್ಷ ಸೇರುವಂತೆ ಆಫರ್ ನೀಡಿದರು ಆದರೆ,ಎಲ್ಲ ಕಮ್ಯೂನಿಸ್ಟ್ ರನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ರಾಯ್ ತಿಳಿಸಿದ್ದಾರೆ.  

ಹಾಲಿ ಶಾಸಕ ಮಮತಾ ರಾಯ್ ಅವರ ಮನೆಗೊ ಕಿಶೋರ್ ಕಡೆಯವರು ಹೋಗಿದ್ದಾರೆ.ಅದೇ ಕ್ಷೇತ್ರದ ಮತ್ತೋರ್ವ ಮಾಜಿ ಶಾಸಕರನ್ನು ಕೂಡಾ ಸಂಪರ್ಕಿಸಿದ್ದಾರೆ.ಮಮತಾ ಕೂಡಾ ಆಫರ್ ತಿರಸ್ಕರಿಸಿದ್ದಾರೆ. 

ಸ್ಥಳೀಯ ನಾಯಕರ ಭ್ರಷ್ಟಾಚಾರದಿಂದಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಬೇಕಾಯಿತು. ಭ್ರಷ್ಟಾಚಾರವಿಲ್ಲದ ಹೊಸ ಮುಖಗಳನ್ನು ಹುಡುಕುತ್ತಿದ್ದೇವೆ.ರಾಯ್ ತರಹದ ಇನ್ನಿಬ್ಬರನ್ನು ಪಕ್ಷ ಸೇರುವಂತೆ ಕೋರಿರುವುದಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

SCROLL FOR NEXT