ದೇಶ

ಪ್ರತಿಯೊಬ್ಬ ಭಾರತೀಯನಿಗೂ ಆರೋಗ್ಯ ಗುರುತಿನ ಚೀಟಿ: ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್‌ಗೆ ಪ್ರಧಾನಿ ಮೋದಿ ಚಾಲನೆ

Srinivasamurthy VN

ನವದೆಹಲಿ: ಭಾರತದ 74ನೇ ಸ್ವಾತಂತ್ರೋತ್ಸವ ದಿನಾಚರಣೆಯ ಸಂದರ್ಭದಲ್ಲೇ ಪ್ರಧಾನಿ ಮೋದಿ ಅವರು  ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್‌ಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ ಅವರು, 'ಸಂಪೂರ್ಣ ತಂತ್ರಜ್ಞಾನ ಆಧರಿತ' ಉಪಕ್ರಮವು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ. ಪ್ರತಿಯೊಬ್ಬ ಭಾರತೀಯನು ಅವರ ವೈದ್ಯಕೀಯ ಪರಿಸ್ಥಿತಿಗಳ ಬಗ್ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಒಳಗೊಂಡಿರುವ ಗುರುತಿನ ಚೀಟಿಯನ್ನು ಪಡೆಯುತ್ತಾರೆ. ಈ ಕಾರ್ಡನ್ನು ಆರೋಗ್ಯ ಸೇವೆಗಳು ಹಾಗೂ ಔಷಧಿಗಳ ಪಡೆಯುವ ವೇಳೆ ಬಳಸಬಹುದು ಎಂದು ಹೇಳಿದರು.  

'ಇಂದಿನಿಂದ ದೇಶದಲ್ಲಿ ಹೊಸ ಅಭಿಯಾನ ಆರಂಭವಾಗಲಿದೆ. ಇದು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ಭಾರತದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ತರಲಿದೆ. ಪ್ರತಿಯೊಬ್ಬ ಭಾರತೀಯನಿಗೂ ಆರೋಗ್ಯ ಗುರುತಿನ ಚೀಟಿ ಸಿಗುತ್ತದೆ. ನೀವು ವೈದ್ಯರನ್ನು ಅಥವಾ ಔಷಧಾಲಯಗಳನ್ನು ಭೇಟಿ ಮಾಡಿದಾಗಲೆಲ್ಲಾ ಈ ಕಾರ್ಡ್‌ನಲ್ಲಿ ಎಲ್ಲವೂ ಲಾಗ್ ಇನ್ ಆಗುತ್ತದೆ. ವೈದ್ಯರ ನೇಮಕಾತಿಯಿಂದ ಹಿಡಿದು ಔಷಧಿಗಳವರೆಗೆ ಎಲ್ಲವೂ ನಿಮ್ಮ ಆರೋಗ್ಯ ಪ್ರೊಫೈಲ್‌ನಲ್ಲಿ ಲಭ್ಯವಿರುತ್ತದೆ' ಎಂದರು.

SCROLL FOR NEXT