ದೇಶ

74ನೇ ಸ್ವಾತಂತ್ರ್ಯೋತ್ಸವ: ವರ್ಣರಂಜಿತ ಕೇಸರಿ ರುಮಾಲು ಧರಿಸಿ ಎಲ್ಲರ ಗಮನ ಸೆಳೆದ ಪ್ರಧಾನಿ ಮೋದಿ

Manjula VN

ನವದೆಹಲಿ: ರಾಷ್ಟ್ರೀಯ ಹಬ್ಬಗಳಲ್ಲಿ ಭಾರತದ ಭವ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ಅನುಸರಿಸುವ ಪದ್ಧತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 74ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲೂ ಮುಂದುವರೆಸಿದ್ದಾರೆ. 

ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು, ಹಳದಿ ಮಿಶ್ರಿತ ಬಿಳಿ ಬಣ್ಣದ ಶರ್ಟ್, ಬಿಳಿ ಮತ್ತು ಕೇಸರಿ ಬಾರ್ಡರ್ ಇರುವ ಶಾಲು, ಕೇಸರಿ ಬಣ್ಣದ ಬಂದೆಜ್ ಸಫಾ ರಾಜಸ್ಥಾನಿ ಪೇಟಾ ಧರಿಸಿ, ಸತತ ಏಳನೇ ಬಾರಿಗೆ ದೆಹಲಿಯ ಕೆಂಪು ಕೋಟೆಯಿಂದ ಐತಿಹಾಸಿಕ ಭಾಷಣ ಮಾಡಿದರು.

ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮೋದಿ ಶ್ವೇತವಸ್ತ್ರಧಾರಿಯಾಗಿ ಜೋಧ್ಪುರಿ ರುಮಾಲು ಧರಿಸುವುದು ವಾಡಿಕೆ. ಪ್ರಧಾನಮಂತ್ರಿಗಳಾದ ಬಳಿಕ ಮೋದಿಯವರು ಪ್ರತೀ ಬಾರಿ ರಾಷ್ಟ್ರೀಯ ಹಬ್ಬಗಳಲ್ಲಿ ಬಣ್ಣ ಬಣ್ಣದ ಜೋಧ್ಪುರಿ ರುಮಾಲುಗಳನ್ನು ಧರಿಸಿ ವಿಶೇಷ ಗಮನ ಸೆಳೆಯುತ್ತಾರೆ. 

ಗಾಢ ಕೇಸರಿ ಬಣ್ಣದ ರುಮಾಲು ಮತ್ತು ಹಳದಿ ಮಿಶ್ರಿತ ಶ್ವೇತ ಬಣ್ಣದ ವಸ್ತ್ರದೊಂದಿಗೆ ಶಿಸ್ತುಬದ್ಧವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಮೋದಿಯವರು ಎಂದಿನಂತೆ ಎಲ್ಲರಿಗೂ ಶುಭ ಕೋರುವಂತೆ, ಭಾರತೀಯ ಸಂಪ್ರದಾಯದಂತೆ ನಮಸ್ಕರಿಸುತ್ತಾ ಆಗಮಿಸಿದರು. 

SCROLL FOR NEXT