ದೇಶ

ವಾಜಪೇಯಿ ಪುಣ್ಯಸ್ಮರಣೆ: ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರ ನಮನ

Manjula VN

ನವದೆಹಲಿ: ಇಂದು ದೇಶದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಎರಡನೇ ವರ್ಷದ ಪುಣ್ಯಸ್ಮರಣೆಯ ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಸ್ಮೃತಿ ಸ್ಥಲ್ ಸದೇವ್ ಅಟಲ್ ತಲುಪಿ ಅಟಲ್ ಜೀ ಅವರಿಗೆ ಗೌರವ ಸಲ್ಲಿಸಿದರು. 

ಭಾರತದ ರತ್ನದಿಂದ ಗೌರವಿಸಲ್ಪಟ್ಟ ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಗಸ್ಟ್ 16, 2018 ರಂದು ತಮ್ಮ 93ನೇ ವಯಸ್ಸಿನಲ್ಲಿ ನಿಧನರಾಗಿದ್ದರು. 

ವಾಜಪೇಯಿ ಅವರು 1996ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದರು. ಆದರೆ, ಈ ಸಮಯದಲ್ಲಿ ಅವರ ಸರ್ಕಾರವು ಕೇವಲ 13 ದಿನಗಳವರೆಗೆ ಅಧಿಕಾರ ನಡೆಸಿತ್ತು. ಇದರ ನಂತರ ಅವರು 1998ರಲ್ಲಿ ಮತ್ತೆ ಪ್ರಧಾನಿಯಾದರು. ಆದರೆ, ಈ ಬಾರಿ ಅವರ ಸರ್ಕಾರ ಕೇವಲ 13 ತಿಂಗಳುಗಳು ಕಾಲ ನಡೆಯಿತು. ಅಂತಿಮವಾಗಿ 1999ರಲ್ಲಿ ಮತ್ತೊಮ್ಮೆ, ವಾಜಪೇಯಿ ಮೂರನೇ ಬಾರಿಗೆ ಪ್ರಧಾನಿಯಾಗಿ 5 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದರು. 

SCROLL FOR NEXT