ನವದೆಹಲಿ: ಚುನಾವಣಾ ಆಯೋಗದ ಮುಖ್ಯಸ್ಥರಾಗಿರುವ ಭಾವಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಯ ಹೊಸ ಉಪಾಧ್ಯಕ್ಷರಾಗಿ ಆಯ್ಕೆಯಾದ ಕೆಲ ದಿನಗಳ ನಂತರ ಅಶೋಕ್ ಲವಾಸಾ ಅವರು ಚುನಾವಣಾ ಆಯುಕ್ತರ ಹುದ್ದೆಗೆ ರಾಜೀನಾಮೆ ನೀಡಿದರು. ಅವರು ಸೆಪ್ಟೆಂಬರ್‌ನಲ್ಲಿ ಎಡಿಬಿಗೆ ಸೇರುವ ಸಾಧ್ಯತೆ ಇದೆ.
ಲವಾಸಾ ಜನವರಿ 23, 2018 ರಂದು ಚುನಾವಣಾ ಆಯುಕ್ತರಾಗಿ ನೇಮಕವಾಗಿದ್ದರು, ಅವರು ಹರಿಯಾಣ ಕೇಡರ್ (1980 ಬ್ಯಾಚ್) ನ ನಿವೃತ್ತ ಐಎಎಸ್ ಅಧಿಕಾರಿ.ಯಾಗಿದ್ದು ಈ ಹಿಂದೆ ಹಣಕಾಸು ಕಾರ್ಯದರ್ಶಿಯಾಗಿ, ಪರಿಸರ ಮತ್ತು ನಾಗರಿಕ ವಿಮಾನಯಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 2001-02ರಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಅವರು ಎಡಿಬಿಗೆ ಸಂಬಂಧಿಸಿದ ವಿಷಯಗಳನ್ನು ಗಮನಿಸಿದ್ದರು.
ಚುನಾವಣಾ ಆಯೋಗದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ನಂತರವೇ ಎಡಿಬಿಯಲ್ಲಿ ಈ ಸ್ಥಾನವನ್ನು ಪಡೆದುಕೊಳ್ಳಬಹುದಾಗಿರುವುದರಿಂದ ಲವಾಸಾ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ,
2021 ರ ಏಪ್ರಿಲ್‌ನಲ್ಲಿ ಹಾಲಿ ಸಿಇಸಿ ಸುನಿಲ್ ಅರೋರಾ ನಿವೃತ್ತಿಯಾದ ನಂತರ ಚುನಾವಣಾ ಆಯೋಗದ ಮುಖ್ಯಸ್ಥರಾಗಿ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಲು ಲವಾಸ ಹೆಸರು ಮುಂಚೂಣಿಯಲ್ಲಿತ್ತು.