ದೇಶ

ಅಯೋಧ್ಯೆಯ ಮಸೀದಿಗೆ ಧನ್ನಿಪುರ ಗ್ರಾಮದ ನಾಮಕರಣ

Srinivas Rao BV

ಅಯೋಧ್ಯೆ: ಮಸೀದಿ ನಿರ್ಮಾಣಕ್ಕಾಗಿ ಸುಪ್ರೀಂಕೋರ್ಟ್ ಮಂಜೂರು ಮಾಡಿರುವ 5 ಎಕರೆ ಭೂಮಿಯಲ್ಲಿ ಕಾಂಪೌಂಡ್‌ ಮತ್ತು ಗಡಿ ಗುರುತಿಸುವಿಕೆ ಕೆಲಸ ಆರಂಭಗೊಂಡಿದೆ. 

ಈ ಮಸೀದಿಯನ್ನು ನಿರ್ಮಿಸುವ ಜವಾಬ್ದಾರಿ ಹೊತ್ತಿರುವ ಇಂಡೋ ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಷನ್‌ ಇದನ್ನು "ಧನ್ನಿಪುರ ಮಸೀದಿ" ಎಂದು ಹೆಸರಿಡಲು ನಿರ್ಧರಿಸಿದ್ದಾರೆ. ಈ ಹೆಸರನ್ನು ಒಂದು ಊರಿನ ಹೆಸರಿನ ಮೇಲೆ ಇರಿಸಲು ನಿರ್ಧರಿಸಲಾಗಿದ್ದು, ಜನರಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದೆ. ಎಲ್ಲಾ ಮತಗಳ ಅನುಯಾಯಿಗಳಿಗೂ ದೇಣಿಗೆ 

ಸುಪ್ರೀಂ ಕೋರ್ಟ್ ನ ಆದೇಶದ ಪ್ರಕಾರ ಉತ್ತರ ಪ್ರದೇಶ ರಾಜ್ಯ ಸರ್ಕಾರ ಧನ್ನಿಪುರ ಗ್ರಾಮದಲ್ಲಿ ಉತ್ತರ ಪ್ರದೇಶ ಸುನ್ನಿ ಕೇಂದ್ರ ವಕ್ಫ್ ಬೋರ್ಡ್ (ಯುಪಿಎಸ್ ಸಿ ಡಬ್ಲ್ಯು ಬಿ) ಗೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು.

ರಾಮಜನ್ಮಭೂಮಿ ವಿವಾದದಲ್ಲಿ ಓರ್ವ ವಾದಿಯಾಗಿದ್ದ ಇಕ್ಬಾಲ್ ಅನ್ಸಾರಿ ಮಸೀದಿಗೆ ಬಾಬರ್ ಹೆಸರನ್ನು ಇಡದಂತೆ ಯುಪಿಎಸ್ ಸಿ ಡಬ್ಲ್ಯು ಬಿ ಮನವಿ ಮಾಡಿದ್ದರು. 

ಬಾಬರ್ ನೊಂದಿಗೆ ನಮಗೇನೂ ಸಂಬಂಧವಿಲ್ಲ. ಆದ್ದರಿಂದ ಸುಪ್ರೀಂ ಕೋರ್ಟ್ ಆದೇಶದಂತೆ ದೊರೆತಿರುವ ಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಮಸೀದಿಗೆ ಬಾಬರ್ ನ ಹೆಸರು ನಾಮಕರಣ ಮಾಡುವ ಅಗತ್ಯವಿಲ್ಲ, ಅದರ ಬದಲು ಮಸೀದಿ ಹಾಗೂ ಆ 5 ಎಕರೆಯ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ  ಭಾರತೀಯ ಮುಸ್ಲಿಮರು ಹೆಮ್ಮೆ ಪಡುವ ಎಪಿಜೆ ಅಬ್ದುಲ್ ಕಲಾಮ್, ಅಶ್ಫಕ್-ಉಲ್ಲಾಹ್ ಖಾನ್, ಅಬ್ದುಲ್ ಹಮೀದ್  ರಂಥಹ ಹೆಮ್ಮೆಯ ವ್ಯಕ್ತಿಗಳ ನಾಮಕರಣ ಮಾಡಬೇಕೆಂದು ಆಗ್ರಹಿಸಿದ್ದಾರೆ. 
 

SCROLL FOR NEXT