ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ 
ದೇಶ

ಪಂಜಾಬಿನಲ್ಲಿ ಸೆಕ್ಷನ್ 144 ಹೇರಲು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಆದೇಶ

ಪಂಜಾಬ್ ರಾಜ್ಯದಲ್ಲಿ  ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ ಸೆಕ್ಷನ್ 144ರ ಅಡಿಯಲ್ಲಿ ನಾಲ್ಕು ಜನರಿಗಿಂತ ಹೆಚ್ಚು ಜನ ಒಂದೆಡೆ ಸೇರದಂತಹ ನಿರ್ಬಂಧವನ್ನು ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಜಾರಿಗೊಳಿಸಿದ್ದಾರೆ.

ಚಂಢೀಗಡ: ಪಂಜಾಬ್ ರಾಜ್ಯದಲ್ಲಿ  ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ ಸೆಕ್ಷನ್ 144ರ ಅಡಿಯಲ್ಲಿ ನಾಲ್ಕು ಜನರಿಗಿಂತ ಹೆಚ್ಚು ಜನ ಒಂದೆಡೆ ಸೇರದಂತಹ ನಿರ್ಬಂಧವನ್ನು ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಜಾರಿಗೊಳಿಸಿದ್ದಾರೆ. 

ವಿವಾಹ ಮತ್ತು 'ಬೋಗ್' ಸಮಾರಂಭಗಳಿಗೆ ನಿರ್ಬಂಧ ಆದೇಶದಿಂದ ವಿನಾಯಿತಿ ನೀಡಲಾಗಿದೆ.ನಿಯಮ ಉಲ್ಲಂಘಿಸುವ ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಕೊರೋನಾವೈರಸ್ ಹೆಚ್ಚಾಗುತ್ತಿರುವಂತೆ ಆಗಸ್ಟ್ 31ರವರೆಗೂ ಲಾಕ್ ಡೌನ್ ನಿರ್ಬಂಧ ಘೋಷಿಸಿದ ಒಂದು ದಿನದ ನಂತರ ಹೊಸದಾದ ನಿರ್ಬಂಧವನ್ನು ಕ್ಯಾಪ್ಟನ್ ಅಮರೀಂದರ್ ಸಿಂಗ್ ಪ್ರಕಟಿಸಿದ್ದಾರೆ.

ಪಂಜಾಬಿನ ಎಲ್ಲಾ 167 ನಗರಗಳು ಮತ್ತು ಪಟ್ಟಣಗಳಲ್ಲಿ ರಾತ್ರಿ ಕರ್ಫ್ಯೂವನ್ನು ಎರಡು ಗಂಟೆಗಳ ಅವಧಿ ಹೆಚ್ಚಿಸಿ ಗುರುವಾರ ಪಂಜಾಬ್ ಸರ್ಕಾರ ಆದೇಶ ಹೊರಡಿಸಿತ್ತು. ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣ ಹಾಗೂ ರಾಜ್ಯದ ಜನರ ಪ್ರಾಣ ಉಳಿವಿಗೆ ಅಗತ್ಯವಾದರೆ ಆಗಸ್ಟ್ 31ರ ನಂತರವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ರಾಜಕೀಯ ಪಕ್ಷಗಳು,ಪ್ರತಿಭಟನೆ, ಸಭೆ, ಸಮಾರಂಭ ನಡೆಸದಂತೆ ಮುಖ್ಯಮಂತ್ರಿ ಮನವಿ ಮಾಡಿಕೊಂಡಿದ್ದಾರೆ.

ಒಂದು ವೇಳೆ 144 ಸೆಕ್ಷನ್ ಉಲ್ಲಂಘಟನೆ ಕಂಡುಬಂದಲ್ಲಿ, ಜನರನ್ನು ಸೇರಿಸುವ ಅಥವಾ ಮಾಸ್ಕ್ ಇಲ್ಲದೆ ಜನರು ಒಂದೆಡೆ ಸೇರುವಂತೆ ಮಾಡುವ ಆಯೋಜಕರನ್ನು ಬಂಧಿಸಲಾಗುವುದು ಎಂದು ಅವರು ಅಧಿಕೃತವಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?