ದೇಶ

ಕೋವಿಡ್-19 ಸಮಯದ ಬಳಕೆ: ಮಹಾಭಾರತವನ್ನು ಅನುವಾದ ಮಾಡಿದ 12 ವರ್ಷದ ಬಾಲಕ 

Srinivas Rao BV

ಜಾಜ್ಪುರ: ಕೋವಿಡ್-19 ಅವಧಿಯನ್ನು ಹಲವರು ಉತ್ತಮವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. 12 ವರ್ಷದ ಬಾಲಕನೋರ್ವ ಮಹಾಭಾರತವನ್ನು ಅನುವಾದ ಮಾಡಿ ಕೋವಿಡ್-19 ರ ಲಾಕ್ ಡೌನ್ ಅವಧಿಯನ್ನು ಅತ್ಯುತ್ತಮವಾಗಿ ಬಳಕೆ ಮಾಡಿಕೊಂಡಿದ್ದಾನೆ. 

ಜಾಜ್ಪುರದಲ್ಲಿರುವ ಉದಯ ಕುಮಾರ್ ಬಾಲಕ ಒಡಿಯಾ ಭಾಷೆಗೆ ಮಹಾಭಾರತವನ್ನು ಭಾಷಾಂತರ ಮಾಡಿದ್ದಾನೆ. ಶಾಲೆಗಳು ಮುಚ್ಚಲ್ಪಟ್ಟಿರುವುದರಿಂದ ಈ ಅವಧಿಯನ್ನು ಸದ್ಬಳಕೆ ಮಾಡಿಕೊಂಡಿದ್ದಾನೆ. 

ಜಯಂತಿ ಸಾಹೋ ಚಂದ್ರಕಾಂತ್ ಸಾಹೋ ಅವರ ಪುತ್ರ ಉದಯ್ ಕುಮಾರ್ ಸಾಹೋ ಖರ್ಮಾಂಗಿ ಗ್ರಾಮದವರಾಗಿದ್ದು, 250 ಪೇಜ್ ಗಳ ಹಿಂದಿಯಿಂದ  ಮಹಾಭಾರತವನ್ನು ಒಡಿಯಾಗೆ ಭಾಷಾಂತರ ಮಾಡಿದ್ದಾರೆ. 

ಮಾರ್ಚ್ ನಲ್ಲಿ ಲಾಕ್ ಡೌನ್ ಘೋಷಣೆಯಾದ ಬೆನ್ನಲ್ಲೇ ಉದಯ್ ಕುಮಾರ್ ಮಹಾಭಾರತವನ್ನು ಭಾಷಾಂತರ ಮಾಡುವ ನಿರ್ಧಾರ ಕೈಗೊಂಡಿದ್ದರು. 

ಲಾಕ್ ಡೌನ್ ಘೋಷಣೆಯಾದ ಬಳಿಕ ಆನ್ ಲೈನ್ ತರಗತಿಗಳು, ಹೋಮ್ ವರ್ಕ್ ಸೇರಿದಂತೆ ಶಾಲೆಗೆ ಸಂಬಂಧಿಸಿದ ಎಲ್ಲವೂ ಮುಗಿದ ಮೇಲೆಯೂ ನನ್ನಲ್ಲಿ ಸಮಯವಿರುತ್ತಿತ್ತು. ಅದನ್ನು ಮಹಾಭಾರತ ಅನುವಾದ ಮಾಡಲು ಉಪಯೋಗಿಸಿಕೊಂಡೆ, ಅದೇ ಅವಧಿಯಲ್ಲಿ ನನ್ನ ವಯಸ್ಸಿನ ಯುವಕನೋರ್ವ 56 ಪುಟಗಳಷ್ಟು ಇದ್ದ ರಾಮಾಯಣವನ್ನು ಅನುವಾದ ಮಾಡಿದ್ದನ್ನು ಕೇಳಿದ್ದೆ. ಆಗಲೇ ನನಗೂ ಮಹಾಭಾರತವನ್ನು ಅನುವಾದ ಮಾಡಬೇಕೆಂಬ ಆಸಕ್ತಿ ಮೂಡಿ ನಿರ್ಧಾರ ಕೈಗೊಂಡೆ ಎಂದು  ಶ್ರೀ ಅರಬಿಂದಾ ನೋಡಲ್ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದುತ್ತಿರುವ ಉದಯ್ ಕುಮಾರ್ ಹೇಳಿದ್ದಾರೆ. 

SCROLL FOR NEXT