ದೇಶ

ನೀಟ್, ಜೆಇಇ ಪರೀಕ್ಷೆಗಳನ್ನು ಮುಂದೂಡುವುದಿಲ್ಲ, ಪರೀಕ್ಷಾ ಕೇಂದ್ರಗಳ ಹೆಚ್ಚಳ:ಕೇಂದ್ರ ಸರ್ಕಾರ

Sumana Upadhyaya

ನವದೆಹಲಿ: ಕೊರೋನಾ ಸೋಂಕಿನ ಸಮಸ್ಯೆ ಮಧ್ಯೆ ಜಂಟಿ ಪ್ರವೇಶ ಪರೀಕ್ಷೆ(ಜೆಇಇ)ಮತ್ತು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್)ಯನ್ನು ಮುಂದೂಡಬೇಕೆಂಬ ಒತ್ತಾಯ ಕೇಳಿಬರುತ್ತಿರುವುದರ ಮಧ್ಯೆ, ಪರೀಕ್ಷೆ ಮುಂದೂಡುವುದಿಲ್ಲ, ಬದಲಿಗೆ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಸಾಮಾಜಿಕ ಅಂತರವನ್ನು ಸೂಕ್ತವಾಗಿ ಕಾಪಾಡಲು ಹೆಚ್ಚಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರ ಶಿಕ್ಷಣ ಸಚಿವಾಲಯದಡಿ ಬರುವ ರಾಷ್ಟ್ರೀಯ ಪರೀಕ್ಷಾ ವಿಭಾಗ ಈ ಪರೀಕ್ಷೆಗಳನ್ನು ನಡೆಸುವ ಉಸ್ತುವಾರಿ ವಹಿಸಿಕೊಂಡಿದ್ದು ಈ ಸಂಬಂಧ ನಿನ್ನೆ ಹೇಳಿಕೆ ಬಿಡುಗಡೆ ಮಾಡಿ ಜೆಇಇ ಪರೀಕ್ಷೆಗೆ ಈಗಿರುವ 570 ಪರೀಕ್ಷಾ ಕೇಂದ್ರಗಳಿಂದ 660ಕ್ಕೆ ಹೆಚ್ಚಿಸಲಾಗುವುದು ಮತ್ತು ನೀಟ್ ಪರೀಕ್ಷೆಗೆ 546ಕ್ಕೆ ಪರೀಕ್ಷಾ ಕೇಂದ್ರಗಳನ್ನು ಏರಿಕೆ ಮಾಡಲಾಗುವುದು ಎಂದು ಹೇಳಿದರು.

ಜೆಇಇ ಪರೀಕ್ಷೆ ಸೆಪ್ಟೆಂಬರ್ 1ರಿಂದ 6ರವರೆಗೆ ನಡೆಯಲಿದೆ. ನೀಟ್ ಪರೀಕ್ಷೆ ಸೆಪ್ಟೆಂಬರ್ 13ರಂದು ಏರ್ಪಡಲಿದೆ. ಈ ವರ್ಷ ದೇಶಾದ್ಯಂತ ಕ್ರಮವಾಗಿ 8.58 ಲಕ್ಷ ಹಾಗೂ 15.97 ಲಕ್ಷ ಅಭ್ಯರ್ಥಿಗಳು ಜೆಇಇ ಮತ್ತು ನೀಟ್ ಪರೀಕ್ಷೆಗೆ ಹಾಜರಾಗಲಿದ್ದಾರೆ.

SCROLL FOR NEXT