ದೇಶ

ಬೆಂಗಳೂರಿನಲ್ಲೇ ಮುಂದಿನ ಏರ್ ಶೋ, 'ಏರೋ ಇಂಡಿಯಾ 2021' ದಿನಾಂಕ ಪ್ರಕಟ

 ಏರೋ ಇಂಡಿಯಾ ಮುಂದಿನ ಆವೃತ್ತಿಯ ಸಂಬಂಧ ರಕ್ಷಣಾ ಸಚಿವಾಲಯವು ತಾತ್ವಿಕ ನಿರ್ಧಾರವನ್ನು ತೆಗೆದುಕೊಂಡಿದ್ದು  ಏಷ್ಯಾದ ಅತಿದೊಡ್ಡ ಏರೋ ಪ್ರದರ್ಶನವಾಗಿರುವ ಏರೋ ಇಂಡಿಯಾ ತನ್ನ ಪಾರಂಪರಿಕ ತಾಣವಾಗಿರುವ ಬೆಂಗಳೂರಿನಲ್ಲಿ  ಮುಂದಿನ ವರ್ಷ ಫೆಬ್ರವರಿ 3ರಿಂದ 5ರನಡುವೆ ನಡೆಯಲಿದೆ ಎಂದು ಅಧಿಕೃತ ಮೂಲಗಳು ಹೇಳಿದೆ. 

ನವದೆಹಲಿ: ಏರೋ ಇಂಡಿಯಾ ಮುಂದಿನ ಆವೃತ್ತಿಯ ಸಂಬಂಧ ರಕ್ಷಣಾ ಸಚಿವಾಲಯವು ತಾತ್ವಿಕ ನಿರ್ಧಾರವನ್ನು ತೆಗೆದುಕೊಂಡಿದ್ದು  ಏಷ್ಯಾದ ಅತಿದೊಡ್ಡ ಏರೋ ಪ್ರದರ್ಶನವಾಗಿರುವ ಏರೋ ಇಂಡಿಯಾ ತನ್ನ ಪಾರಂಪರಿಕ ತಾಣವಾಗಿರುವ ಬೆಂಗಳೂರಿನಲ್ಲಿ  ಮುಂದಿನ ವರ್ಷ ಫೆಬ್ರವರಿ 3ರಿಂದ 5ರನಡುವೆ ನಡೆಯಲಿದೆ ಎಂದು ಅಧಿಕೃತ ಮೂಲಗಳು ಹೇಳಿದೆ.

ದೇಶೀಯ ರಕ್ಷಣಾ ಉದ್ಯಮ ಮತ್ತು ಜಾಗತಿಕ ವೈಮಾನಿಕ ಸಂಸ್ಥೆಗಳ ಒತ್ತಾಸೆಯ ಮೇರೆಗೆ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ವೈಮಾನಿಕ ಪ್ರದರ್ಶನ ನಡೆಸಲು ಸಚಿವಾಲಯ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ವಿವರಿಸಿದೆ.

ಬೃಹತ್ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈಗಾಗಲೇ ಹಲವಾರು ಆಂತರಿಕ ಸಭೆಗಳನ್ನು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. "ಕೊರೋನಾವೈರಸ್  ಸಾಂಕ್ರಾಮಿಕ ರೋಗದ ವಿರುದ್ಧ ಗರಿಷ್ಠ ಮುನ್ನೆಚ್ಚರಿಕೆ ವಹಿಸುವುದರೊಡನೆ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ನಿರ್ಧರಿಸಲಾಗಿದೆ."

1996 ರಲ್ಲಿ ಮೊದಲ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಪ್ರಾರಂಭವಾದಾಗಿನಿಂದ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. 

ಹಲವಾರು ದೇಶಗಳ ಅಧಿಕೃತ ನಿಯೋಗಗಳಲ್ಲದೆ ಗಮನಾರ್ಹ ಸಂಖ್ಯೆಯ ಜಾಗತಿಕ ರಕ್ಷಣಾ  ಉತ್ಪಾದಕ ಸಂಸ್ಥೆಗಳು  ದೊಡ್ಡ ಹೂಡಿಕೆದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳದಲ್ಲಿ ಸಂಪುಟ ಹಂಚಿಕೆ ಗೊಂದಲ: ಕಾಂಗ್ರೆಸ್ ಹೈಕಮಾಂಡ್ ಸಲಹೆ ತಿರಸ್ಕರಿಸಿದ CM ಸತೀಶನ್, ಖಾತೆ ಹಂಚಿಕೆಯಲ್ಲಿ ಭಿನ್ನಮತ ಸ್ಫೋಟ..!

WTCಯಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆ: ಪಾಕಿಸ್ತಾನವನ್ನು 2-0 ಅಂತರದಿಂದ ಸೋಲಿಸಿ Team Indiaನ ಹಿಂದಿಕ್ಕಿದ ಬಾಂಗ್ಲಾ!

ನಮ್ಮ ನೋವನ್ನು ಆನಂದಿಸುತ್ತೀರಾ: ನನಗೆ ವಯಸ್ಸಾಗಿದೆ, ಆದರೆ ಹೋರಾಡೋದು ಮರೆತಿಲ್ಲ; ಸಲ್ಮಾನ್ ಖಾನ್ ಎಚ್ಚರಿಕೆ!

ಆನೇಕಲ್‌ನಲ್ಲಿ ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ರೈತರು, KRS ತೀವ್ರ ವಿರೋಧ!

ನಿಜಕ್ಕೂ ನಮ್ಮದು F…Good Team: ಲೈವ್​ನಲ್ಲೇ 'ಅಶ್ಲೀಲ ಪದ' ಬಳಸಿದ ರಿಷಭ್ ಪಂತ್, ವ್ಯಾಪಕ ಟೀಕೆ, Video!

SCROLL FOR NEXT