ದೇಶ

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಸೇನೆಯ ಬೇಟೆ: ಪುಲ್ವಾಮದಲ್ಲಿ ಮೂವರು ಉಗ್ರರು ಎನ್ ಕೌಂಟರ್; ಓರ್ವ ಯೋಧ ಹುತಾತ್ಮ 

Srinivas Rao BV

ಪುಲ್ವಾಮ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. 

ಆ.29 ರಂದು ಈ ಘಟನೆ ವರದಿಯಾಗಿದ್ದು, ಜಮ್ಮು-ಕಾಶ್ಮೀರ ಪೊಲೀಸ್, ಭಾರತೀಯ ಸೇನೆ, ಸಿಆರ್ ಪಿಎಫ್ ಜಂಟಿ ಕಾರ್ಯಾಚರಣೆಯ ಪರಿಣಾಮವಾಗಿ ಪುಲ್ವಾಮದಲ್ಲಿನ ಝಡೂರ ಪ್ರದೇಶದಲ್ಲಿ ಉಗ್ರರನ್ನು ಎನ್ ಕೌಂಟರ್ ಮಾಡಲಾಗಿದೆ. 

ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದ ಓರ್ವ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಎನ್ ಕೌಂಟರ್ ನಡೆದ ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತರಾದ ಉಗ್ರರು ಯಾವ ಸಂಘಟನೆಯವರೆಂದು ಇನ್ನಷ್ಟೇ ತಿಳಿಯಬೇಕಿದೆ. ಎನ್ ಕೌಂಟರ್ ಮುಕ್ತಾಯಗೊಂಡಿದೆಯೋ ಇಲ್ಲವೋ ಎಂಬ ಬಗ್ಗೆಯೂ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ. 

ಆ.29 ರಂದು ರಾತ್ರಿ 1 ಗಂಟೆಗೆ ಈ ಗುಂಡಿನ ಚಕಮಕಿ ಪ್ರಾರಂಭವಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮುನ್ನ ಆ.28 ರಂದು ನಾಲ್ವರು ಉಗ್ರರನ್ನು ಎನ್ ಕೌಂಟರ್ ಮಾಡಲಾಗಿತ್ತು. ಈ ಎನ್ ಕೌಂಟರ್ ಮೂಲಕ ಜಮ್ಮು-ಕಾಶ್ಮೀರದಲ್ಲಿ 24 ಗಂಟೆಗಳಲ್ಲಿ 7 ಉಗ್ರರನ್ನು ಹೊಡೆದುರುಳಿಸಲಾಗಿದೆ. ಈ ವರ್ಷ ಹತರಾಗಿರುವ ಭಯೋತ್ಪಾದಕರ ಸಂಖ್ಯೆ 153 ಕ್ಕೆ ಏರಿಕೆಯಾಗಿದೆ. 

SCROLL FOR NEXT