ದೇಶ

ಪುರಾತನ ಭಾರತೀಯ ವಿಜ್ಞಾನವನ್ನು ಸಂಸ್ಕೃತದಲ್ಲಿ ಬೋಧಿಸಲಿರುವ ಐಐಟಿ-ಇಂದೋರ್

Srinivas Rao BV

ಇಂದೋರ್: ಪುರಾತನ ಭಾರತೀಯ ವಿಜ್ಞಾನವನ್ನು ಸಂಸ್ಕೃತದಲ್ಲಿ ಬೋಧಿಸುವ ತರಗತಿಗಳನ್ನು ಐಐಟಿ-ಇಂದೋರ್ ಪ್ರಾರಂಭಿಸಿದೆ. 

ಭಾಸ್ಕರಾಚಾರ್ಯರ ಗಣಿತದ ಗ್ರಂಥ ಲೀಲಾವತಿಯಿಂದ ಮೊದಲುಗೊಂಡು ಶಾಸ್ತ್ರೀಯ ವೈಜ್ಞಾನಿಕ ಪಠ್ಯಗಳನ್ನು ಸಂಸ್ಕೃತದಲ್ಲಿಯೇ ಬೋಧಿಸುವುದಕ್ಕೆ ಪ್ರಾರಂಭಿಸಿದೆ.

ಟೈಮ್ಸ್ ಆಫ್ ಇಂಡಿಯಾದಲ್ಲಿ ಈ ಬಗ್ಗೆ ವರದಿ ಪ್ರಕಟಗೊಂಡಿದ್ದು, ಈ ತರಗತಿಗಳಿಗಾಗಿ ಜಾಗತಿಕ ಮಟ್ಟದಲ್ಲಿ 750 ಮಂದಿ ನೋಂದಣಿ ಮಾಡಿಕೊಂಡಿದ್ದು ಆ.22 ರಿಂದ ಪ್ರಾರಂಭಗೊಂಡಿದೆ. 

ತರಗತಿಗಳ ಮೊದಲ ಆವೃತ್ತಿ ಅ.2 ರಂದು ಮುಕ್ತಾಯಗೊಳ್ಳಲಿದೆ. ಮೆಟಲರ್ಜಿ, ಖಗೋಳವಿಜ್ಞಾನ, ಔಷಧ, ಸಸ್ಯ ವಿಜ್ಞಾನಗಳನ್ನೂ ಸಹ ಸಂಸ್ಕೃತದಲ್ಲಿ ಬೋಧಿಸಲು ಯೋಜನೆ ರೂಪಿಸಿದೆ. 

ಸಂಸ್ಕೃತ ಪುರಾತನ ಭಾಷೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲೂ ಸಹ ಸಂಸ್ಕೃತ ಛಾಪು ಮೂಡಿಸುತ್ತಿದೆ, ಸಂಸ್ಕೃತ ಭವಿಷ್ಯದ ಭಾಷೆಯಾಗಲಿದೆ. ಸಂಸ್ಕೃತದಲ್ಲೇ ಪುರಾತನ ಭಾರತೀಯ ವಿಜ್ಞಾನವನ್ನು ಕಲಿತು ಪುರಾತನ ಭಾಷೆಯಲ್ಲೇ ವಿದ್ಯಾರ್ಥಿಗಳು ಸಂವಹನ ನಡೆಸಬಹುದಾಗಿದೆ ಎಂದು ಐಐಟಿ-ಇಂದೋರ್ ನ ನಿರ್ದೇಶಕ ಪ್ರೊಫೆಸರ್ ನೀಲೇಶ್ ಕುಮಾರ್ ಜೈನ್ ತಿಳಿಸಿದ್ದಾರೆ. 

SCROLL FOR NEXT