ದೇಶ

ಎಡಿಎ ಅನುಮೋದನೆಗಾಗಿ ರಾಮಮಂದಿರ ವಿನ್ಯಾಸ ನೀಡಿದ ಅಯೋಧ್ಯೆ ಟ್ರಸ್ಟ್

Raghavendra Adiga

ಅಯೋಧ್ಯೆ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್  ಅಯೋಧ್ಯೆಯ ರಾಮ ಮಂದಿರದ ವಿನ್ಯಾಸ ಮತ್ತು ಅದಕ್ಕೆ ಸಂಬಂಧಿಸಿದ ಇತರ ದಾಖಲೆಗಳನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರಕ್ಕೆ (ಎಡಿಎ) ಅನುಮೋದನೆಗಾಗಿ ಸಲ್ಲಿಸಿದೆ.

ಟ್ರಸ್ಟ್‌ನ ಸದಸ್ಯ ಡಾ.ಅನಿಲ್ ಮಿಶ್ರಾ ಅವರು ಶನಿವಾರ ದಾಖಲೆಗಳನ್ನು ಎಡಿಎ ಉಪಾಧ್ಯಕ್ಷ ಮತ್ತು ಕಾರ್ಯದರ್ಶಿ ನೀರಜ್ ಶುಕ್ಲಾ ಅವರಿಗೆ ಹಸ್ತಾಂತರಿಸಿದರು.

'ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟಿ ಡಾ.ಅನಿಲ್ ಮಿಶ್ರಾ ಅವರು ಶ್ರೀ ರಾಮಜನ್ಮಭೂಮಿ ಮಂದಿರದ ವಿನ್ಯಾಸ ಮತ್ತು ಇತರ ಅಗತ್ಯ ದಾಖಲೆಗಳನ್ನು ಉಪಾಧ್ಯಕ್ಷ ಮತ್ತು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗೆ ಅನುಮೋದನೆಗಾಗಿ ಹಸ್ತಾಂತರಿಸಿದರು,  ಈ ನಕ್ಷೆಯ ಅನುಮೋದನೆಯ ಬಳಿಕ ನಿರ್ಮಾಣ ಕಾರ್ಯಗಳು ಪ್ರಾರಂಬವಾಗಬಹುದು.  'ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್  ಟ್ವೀಟ್ ನಲ್ಲಿ ತಿಳಿಸಿದೆ.

ಆಗಸ್ಟ್ 20 ರಂದು ಟ್ರಸ್ಟ್ ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣವು 'ಪ್ರಾರಂಭವಾಗಿದೆ' ಮತ್ತು ಎಂಜಿನಿಯರ್‌ಗಳು ಈಗ ಸ್ಥಳದಲ್ಲಿ ಮಣ್ಣನ್ನು ಪರೀಕ್ಷಿಸುತ್ತಿದ್ದಾರೆ ಎಂದು ಹೇಳಿತ್ತು. ಟ್ರಸ್ಟ್ ಪ್ರಕಾರ, ದೇಶದ ಪ್ರಾಚೀನ ಮತ್ತು ಸಾಂಪ್ರದಾಯಿಕ ನಿರ್ಮಾಣ ತಂತ್ರಗಳನ್ನು ಅನುಸರಿಸಿ ಈ ದೇವಾಲಯವನ್ನು ನಿರ್ಮಿಸಲಾಗುವುದು. ಭೂಕಂಪ, , ಬಿರುಗಾಳಿ,  ಇತರ ನೈಸರ್ಗಿಕ ವಿಕೋಪಗಳಿಂದ ಸಂರಕ್ಷಣೆಗಾಗಿ ಅನುಕೂಲವಾಗುವಂತೆ ಇದನ್ನು ನಿರ್ಮಿಸಲಾಗುವುದು.

ರಾಮ ಜನ್ಮಭೂಮಿ ಸ್ಥಳದಲ್ಲಿ 'ಭೂಮಿ ಪೂಜೆಗೆ' ಹಾಜರಾಗಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 5 ರಂದು ಅಯೋಧ್ಯೆಗೆ ಭೇಟಿ ನೀಡಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಮೇಲ್ವಿಚಾರಣೆಗೆ ಪ್ರಧಾನಿ ಮೋದಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಘೋಷಿಸಿದರು.

SCROLL FOR NEXT