ದೇಶ

ಮಾತುಕತೆ ವಿಫಲ ನಂತರ ನಿರ್ದಿಷ್ಟ ವಿಷಯಗಳೊಂದಿಗೆ ಚರ್ಚೆಗೆ ಬರುವಂತೆ ರೈತರಿಗೆ ಹೇಳಿದ ಕೇಂದ್ರ ಸಚಿವ ತೋಮರ್

Nagaraja AB

ನವದೆಹಲಿ: ಪ್ರತಿಭಟನಾ ನಿರತ ರೈತರೊಂದಿಗೆ ಇಂದು ನಡೆದ ಸಭೆಯಲ್ಲಿ ಯಾವುದೇ ಒಮ್ಮತದ ತೀರ್ಮಾನಕ್ಕೆ ಬರುವಲ್ಲಿ ವಿಫಲವಾಗಿದ್ದು, ನಿರ್ದಿಷ್ಟ ವಿಷಯಗಳೊಂದಿಗೆ ಬರುವಂತೆ ರೈತರಿಗೆ ಹೇಳಿದ್ದು, ಅವರ ಸಮಸ್ಯೆಗಳನ್ನು ಚರ್ಚಿಸಲು ಕೇಂದ್ರ ಸರ್ಕಾರ ಸಿದ್ಧವಿದೆ  ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವಂತೆಯೇ ಇಂದು ವಿಜ್ಞಾನ ಭವನದಲ್ಲಿ 35 ರೈತ ಸಂಘಟನೆಗಳ ಪ್ರತಿನಿಧಿಯೊಂದಿಗೆ ಸಮಗ್ರವಾಗಿ ಚರ್ಚೆ ನಡೆಸಲಾಗಿದೆ. ಮತ್ತೆ ಡಿಸೆಂಬರ್ 3 ರಂದು ಸಭೆ ನಡೆಯಲಿದೆ.ಚಿಕ್ಕ ಸಮಿತಿ ರಚನೆಗೆ ಸಲಹೆ ನೀಡಿದ್ದೇವೆ, ಆದರೆ, ಆ ಸಮಿತಿಯಲ್ಲಿ ತಾವಿರಬೇಕೆಂದು ಅವರು ಹೇಳಿದ್ದು, ಅದಕ್ಕೆ  ಒಪ್ಪಿಕೊಂಡಿರುವುದಾಗಿ ತೋಮರ್ ಸಭೆಯ ಬಳಿಕ ತಿಳಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಎಲ್ಲಾ ರೈತರೊಂದಿಗೆ ಚರ್ಚಿಸಲು ಸಿದ್ಧವಿರುವುದಾಗಿ ತಿಳಿಸಿದ ಸಚಿವರು, ಪ್ರತಿಭಟನೆ ಯಾವಾಗ ಅಂತ್ಯವಾಗಲಿದೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ. ರೈತರು ಯಾವುದೇ ನಿರ್ದಿಷ್ಟ ಸಮಸ್ಯೆಗಳೊಂದಿಗೆ ಚರ್ಚಿಸಲು ಬಂದರೆ ಅವುಗಳನ್ನು ಪರಿಶೀಲಿಸುವುದಾಗಿ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.

SCROLL FOR NEXT