ದೇಶ

ಜಮ್ಮು-ಕಾಶ್ಮೀರ: ಡಿಡಿಸಿ ಚುನಾವಣೆ ಮೂರನೇ ಹಂತದಲ್ಲಿ ಶೇ.50ಕ್ಕೂ ಹೆಚ್ಚು ಮತದಾನ

Srinivas Rao BV

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಡಿಡಿಸಿ ಚುನಾವಣೆಯ ಮೂರನೇ ಹಂತದಲ್ಲಿ ಶೇ.50 ಕ್ಕೂ ಹೆಚ್ಚು ಮತದಾನ ನಡೆದಿದೆ. ಭಯೋತ್ಪಾದಕ ಪೀಡಿತ ಪ್ರದೇಶವಾದ ಕುಲ್ಗಾಂ ನಲ್ಲಿ ಶೇ.64.45 ರಷ್ಟು ಮತದಾನ ನಡೆದಿದ್ದು, ಇದು ಕಣಿವೆಯಲ್ಲಿ ದಾಖಲೆಯ ಮತದಾನ ಎನಿಸಿದೆ.

ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ರಿಯಾಸಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ.75.20 ರಷ್ಟು ಮತದಾನವಾಗಿದ್ದು, ಇದು ಕೇಂದ್ರಾಡಳಿತ ಪ್ರದೇಶದಲ್ಲೇ ಅತಿ ಹೆಚ್ಚಿನ, ದಾಖಲೆ ಪ್ರಮಾಣದ ಮತದಾನವಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಕೆ.ಕೆ ಶರ್ಮಾ ತಿಳಿಸಿದ್ದಾರೆ.

ಜಮ್ಮು ಪ್ರದೇಶದಲ್ಲಿ ಸಾಧಾರಣ ಎನಿಸುವ ಶೇ.68.88 ರಷ್ಟು ಮತದಾನವಾಗಿದ್ದರೆ, ರಜೌರಿ ಜಿಲ್ಲೆಯಲ್ಲಿ ಶೇ.72.81 ರಷ್ಟು ಮತದಾನ ನಡೆದಿದ್ದರೆ, ದೋಡಾ ಜಿಲ್ಲೆಯಲ್ಲಿ ಅತಿ ಕಡಿಮೆ ಶೇ.59.51 ರಷ್ಟು ಮತದಾನ ನಡೆದಿದೆ. ಕಾಶ್ಮೀರ ಪ್ರದೇಶದಲ್ಲಿ ಶೇ.31.61 ರಷ್ಟು ಮತದಾನ ನಡೆದಿದ್ದು, ಬಂಡಿಪೋರಾದಲ್ಲಿ ಶೇ.56.73 ರಷ್ಟು ಮತದಾನ ನಡೆದಿದ್ದರೆ, ಬದ್ಗೌಮ್ ನಲ್ಲಿ ಶೇ.50.18 ರಷ್ಟು ಮತದಾನ ನಡೆದಿದೆ.

40 ಸರ್ಪಂಚ್ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

SCROLL FOR NEXT