ದೇಶ

ಜೈಲಿನಿಂದ ಶೀಘ್ರ ಬಿಡುಗಡೆಗೆ ಶಶಿಕಲಾಗೆ ಅರ್ಹತೆ ಇದ್ದಂತಿಲ್ಲ!

Nagaraja AB

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಆಪ್ತೆ ವಿ ಕೆ ಶಶಿಕಲಾ ಅವರ ಶೀಘ್ರ ಬಿಡುಗಡೆಗೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಕಾರಾಗೃಹದ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆಕೆಯ ಪರ ವಕೀಲರು ತಿಳಿಸಿದ್ದಾರೆ.

ಆ ವಿನಾಯಿತಿ ಪಡೆಯುವಲ್ಲಿ ಆಕೆ ಅರ್ಹರಲ್ಲ ಎಂದು ರಾಜ್ಯ ಜೈಲು ಇಲಾಖೆಯ ಮೂಲಗಳು ತಿಳಿಸಿವೆ.

ಮಾರ್ಗಸೂಚಿಗಳ ಪ್ರಕಾರ, ಸಿಬಿಐ ಅಥವಾ ಎನ್‌ಐಎ ತನಿಖೆ ನಡೆಸುವ ಪ್ರಕರಣಗಳಲ್ಲಿ ಅಪರಾಧಿಗಳು ಅಕಾಲಿಕ ಬಿಡುಗಡೆಗೆ ಅರ್ಹರಲ್ಲ. ಅಲ್ಲದೆ, ಶಶಿಕಲಾ ಭಾಗಿಯಾಗಿರುವ ಪ್ರಕರಣವು ಅಕ್ರಮ ಇ ಸ್ವತ್ತುಗಳ ಪ್ರಕರಣವಾಗಿದ್ದು, ಭ್ರಷ್ಟಾಚಾರ ಪ್ರಕರಣಗಳಲ್ಲೂ ಶೀಘ್ರವಾಗಿ ಬಿಡುಗಡೆ ಮಾಡಲು ಯಾವುದೇ ಅವಕಾಶವಿಲ್ಲ ಎಂದು ಜೈಲು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ,  ಇದುವರೆಗೆ ಯಾವುದೇ ಪರಿಹಾರದ ಅರ್ಜಿಯನ್ನು ಅಧಿಕೃತವಾಗಿ ತಿರಸ್ಕರಿಸಲಾಗಿಲ್ಲ.

ಆದಾಗ್ಯೂ, ಆಕೆಯ ಶೀಘ್ರ ಬಿಡುಗಡೆಗೆ ಅರ್ಜಿ ಸಲ್ಲಿಸಲಾಗಿದೆ. ವಾರದೊಳಗೆ ಜೈಲಿನ ಅಧಿಕಾರಿಗಳು ಪ್ರತಿಕ್ರಿಯಿಸುವ ಸಾಧ್ಯತೆಯಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಸುಳ್ಳು ವರದಿಗಳು ಹರಿದಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಪ್ರಸ್ತುತ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಶಶಿಕಲಾ ಅವರ ಶಿಕ್ಷೆಯ ಅವಧಿ ಮುಂದಿನ ವರ್ಷ ಜನವರಿಗೆ ಅಂತ್ಯಗೊಳ್ಳಲಿದೆ. ನ್ಯಾಯಾಲಯ ವಿಧಿಸಿದ್ದ 10 ಕೋಟಿ ರೂ. ದಂಡವನ್ನು ಅವರು ಈಗಾಗಲೇ ಜಮಾ ಮಾಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT