ರದ್ ಅರವಿಂದ್ ಬೊಬ್ಡೆ 
ದೇಶ

ಭಾರತದ ಮುಖ್ಯ ನ್ಯಾಯಮೂರ್ತಿ ಬೊಬ್ಡೆ ತಾಯಿಗೆ 2.5 ಕೋಟಿ ವಂಚನೆ, ಆಸ್ತಿ ಉಸ್ತುವಾರಿದಾರನ ಬಂಧನ

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಶರದ್ ಅರವಿಂದ್ ಬೊಬ್ಡೆ ಅವರ ತಾಯಿಗೆ ನಾಗ್ಪುರದ ಕೌಟುಂಬಿಕ ಆಸ್ತಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ 2.5 ಕೋಟಿ ರೂ. ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಶರದ್ ಅರವಿಂದ್ ಬೊಬ್ಡೆ ಅವರ ತಾಯಿಗೆ ನಾಗ್ಪುರದ ಕೌಟುಂಬಿಕ ಆಸ್ತಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ 2.5 ಕೋಟಿ ರೂ. ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ತಪಸ್ ಘೋಷ್(49) ಎಂಬಾತನನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ.

ವಿಶೇಷ ತನಿಖಾ ತಂಡ (ಎಸ್‌ಐಟಿ) ಡಿಸಿಪಿ ವಿನಿತಾ ಸಾಹು ಅವರ ನೇತೃತ್ವದಲ್ಲಿ ಈ ಕುರಿತ ತನಿಖೆ ನಡೆಯುತ್ತಿದೆ ಎಂದು ನಾಗ್ಪುರ ಪೊಲೀಸ್ ಆಯುಕ್ತ (ಸಿಪಿ) ಅಮಿತೇಶ್ ಕುಮಾರ್ ತಿಳಿಸಿದ್ದಾರೆ.

ಸಿಜೆಐ ಬೊಬ್ಡೆ ಅವರ ತಾಯಿ ಮುಕ್ತಾ ಬೊಬ್ಡೆ ಆಕಾಶವಾಣಿಸ್ಕ್ವೇರ್ ಬಳಿಯ ಸಿಡಾನ್ ಲಾನ್ ಮಾಲೀಕರಾಗಿದ್ದು, ಇದನ್ನು ಮದುವೆ ಮತ್ತು ಇತರ ಕಾರ್ಯಗಳಿಗಾಗಿ ಬಾಡಿಗೆಗೆ ನೀಡಲಾಗುತ್ತಿತ್ತು ಎಂದು ಅವರು ಹೇಳಿದರು. ಬೊಬ್ಡೆ ಕುಟುಂಬವು ಆರೋಪಿ ಘೋಷ್‌ರನ್ನು 2007 ರಲ್ಲಿ ಆಸ್ತಿಯ ಉಸ್ತುವಾರಿಯನ್ನಾಗಿ ನೇಮಕ ಮಾಡಿಕೊಂಡಿತ್ತು. ಅವರಿಗೆ ಸಂಬಳ ಮತ್ತು ಬುಕಿಂಗ್ ಕಮಿಷನ್ ಸಹ ನೀಡಲಾಗುತ್ತಿತ್ತು.

ಮುಕ್ತಾ ಬೊಬ್ಡೆ ಅವರ ಹಿರಿತನ ಹಾಗೂ ಆರೋಗ್ಯದಲ್ಲಿನ ಏರುಪೇರಿನ ಲಾಭವನ್ನು ಪಡೆದುಕೊಂಡ ಘೋಷ್ ಮತ್ತು ಅವರ ಪತ್ನಿ ಆಸ್ತಿ ವಹಿವಾಟಿನ ಸಂಬಂಧ ಮಾಲೀಕರನ್ನು ಕತ್ತಲಲ್ಲಿರಿಸಿರು ಸಂಗ್ರಹಿಸಿದ ಸಂಪೂರ್ಣ ಬಾಡಿಗೆ ಮೊತ್ತವನ್ನು ಜಮಾ ಮಾಡದೆ ವಂಚಿಸಿದ್ದಾರೆ. ಆರೋಪಿಗಳು ನಕಲಿ ರಶೀದಿಗಳನ್ನು ಸಹ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಕೊರೋನಾವೈರಸ್ ಲಾಕ್ ಡೌನ್ ಸಮಯದಲ್ಲಿ ಹಲವಾರು ಬುಕಿಂಗ್ ಗಳನ್ನು ರದ್ದುಗೊಳಿಸಿದಾಗ ವಂಚನೆ ಬೆಳಕಿಗೆ ಬಂದಿತು ಆದರೆ ಗ್ರಾಹಕರಿಗೆ ಘೋಷ್ ನಿಂದ ಬುಕಿಂಗ್ ಮೊತ್ತವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

ಮುಕ್ತಾ ಬೊಬ್ಡೆ ಆಗಸ್ಟ್ ನಲ್ಲಿ ವಂಚನೆ ಸಂಬಂಧ ದೂರು ಸಲ್ಲಿಸಿದ ನಂತರ ಆರ್ಥಿಕ ಅಪರಾಧಗಳ ವಿಭಾಗವನ್ನು ಒಳಗೊಂಡ ಎಸ್ಐಟಿ ರಚಿಸಲಾಯಿತು. 2017 ರಿಂದ ಎಲ್ಲಾ ಬುಕಿಂಗ್‌ಗಳನ್ನು ಪರಿಶೀಲನೆ ನಡೆಸಲಾಗಿದ್ದು, ಘೋಷ್ ಬೊಬ್ಡೆ ಕುಟುಂಬಕ್ಕೆ 2.5 ಕೋಟಿ ರೂ.ಗಳ ವಂಚಿಸಿದ್ದಾನೆ ಎಂದು ತಿಳಿದುಬಂದಿದೆ ಎಂದು ಪೊಲೀಸ್ ಆಯುಕ್ತತಿಳಿಸಿದ್ದಾರೆ. .

ಸಿಸ್ಟಮ್ ಇಸ್ನ್ಟಾಲೇಷನ್ ಮತ್ತು ಕೆಲವು ಫ್ಯಾಬ್ರಿಕೇಶನ್ ಕೆಲಸಗಳ ಬಿಲ್ ಸಹ ಅವನು ಪಾವತಿಸಿಲ್ಲ ಎಂದು ಕುಮಾರ್ ಹೇಳಿದರು. ಎಸ್ಐಟಿ ತನ್ನ ತನಿಖೆಯ ಸಮಯದಲ್ಲಿ ಘೋಷ್ ನನ್ನು ವಿಚಾರಣೆ ನಡೆಸಿ ಪ್ರಶ್ನಿಸಿತ್ತು. ಮಂಗಳವಾರ ತಡರಾತ್ರಿ, ಎಸ್‌ಐಟಿ ಅಧಿಕಾರಿಗಳು ನಗರದ ಸೀತಾಬುಲ್ಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 409 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ), 420 (ಮೋಸ) ಮತ್ತು 467 (ವಂಚನೆ)ಅಡಿಯಲ್ಲಿ ಘೋಷ್ ಮತ್ತು ಅವನ ಪತ್ನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು  ಘೋಷ್ ನನ್ನು ಬಂಧಿಸಿದೆ.

ಸಧ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಡಿಸೆಂಬರ್ 16 ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Madhya Pradesh: ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ದುರಂತ, ಮಹಿಳೆಯರು, ಮಕ್ಕಳು ಸೇರಿದಂತೆ 14 ಮಂದಿ ಸಾವು!Video

ಈ ಬಾರಿ 'ಮೈಸೂರು ದಸರಾ' ಯಶಸ್ವಿ; ಬೆಳೆ ಹಾನಿಯಾದ ಎಲ್ಲ 10 ಲಕ್ಷ ಹೆಕ್ಟೇರ್ ಗೂ ಸಮೀಕ್ಷೆ ನಂತರ ಪರಿಹಾರ: ಸಿಎಂ ಸಿದ್ದರಾಮಯ್ಯ

'RSS ನಲ್ಲಿ ಒಬ್ಬ ವ್ಯಕ್ತಿಯೂ ಇಲ್ಲ': ಪ್ರಧಾನಿ ಮೋದಿ ಹೇಳಿಕೆಗೆ ಓವೈಸಿ ತಿರುಗೇಟು!

2026 T20 World Cup: ಅರ್ಹತೆ ಪಡೆದ ನಮೀಬಿಯಾ, ಜಿಂಬಾಬ್ವೆ!

ಅಂಬೇಡ್ಕರ್ ಸಿದ್ಧಾಂತದಂತೆ ಬದುಕಿದ್ದೇವೆ; RSS ಕಾರ್ಯಕ್ರಮಕ್ಕೆ ಹೋಗಲ್ಲ: CJI ಗವಾಯಿ ತಾಯಿ ಪತ್ರ

SCROLL FOR NEXT