ದೇಶ

ರೈತರ ಬೇಡಿಕೆಗಳನ್ನು ತಕ್ಷಣದಿಂದ ಜಾರಿಗೊಳಿಸಿ: ಕೇಂದ್ರಕ್ಕೆ ಸಚಿನ್ ಪೈಲಟ್ ಒತ್ತಾಯ

Raghavendra Adiga

ಜೈಪುರ್: ದೆಹಲಿಯ ಹೊರಗೆ ಪ್ರತಿಭಟನೆ ನಡೆಸಿರುವ ರೈತರ ಬೇಡಿಕೆಗಳನ್ನು ತಕ್ಷಣದಿಂದ ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಮುಖಂಡ ಮತ್ತು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಗುರುವಾರ ಕೇಂದ್ರವನ್ನು ಒತ್ತಾಯಿಸಿದ್ದಾರೆ. 

"ರೈತರು ಸಂಪೂರ್ಣ ಜಾಗೃತರಾಗಿದ್ದಾರೆ. ಅವರ ಭವಿಷ್ಯ, ಹಕ್ಕು ಮತ್ತು ಭೂಮಿಯನ್ನು ರಕ್ಷಿಸಲು ಸಮರ್ಥರಾಗಿದ್ದಾರೆ ಕೇಂದ್ರ ಸರ್ಕಾರವು ಅವರನ್ನು ಯಾವುದೇ ಕೆಟ್ಟ ಮತ್ತು ಪ್ರಜಾಪ್ರಭುತ್ವ ವಿರೋಧಿ ಪ್ರಯತ್ನಗಳಿಂದ ಗೊಂದಲಕ್ಕೀಡುಮಾಡಲು ಸಾಧ್ಯವಿಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ರೈತರ ಎಲ್ಲ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಕೂಡಲೇ ಒಪ್ಪಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಸಾವಿರಾರು ಸಂಖ್ಯೆಯ ರೈತರು ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆಯನ್ನು ಕಿತ್ತುಹಾಕಲು ದಾರಿ ಮಾಡಿಕೊಡುತ್ತವೆ ಮತ್ತುಬೃಹತ್ ಬಂಡವಾಳಶಾಹಿ ಸಂಸ್ಥೆಗಳ "ಹಿಡಿತಕ್ಕೆ" ಸಿಕ್ಕಲು ಕಾರಣವಾಗುತ್ತವೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ, ಹೊಸ ಕಾನೂನುಗಳು ರೈತರಿಗೆ ಉತ್ತಮ ಅವಕಾಶಗಳನ್ನು ನೀಡುತ್ತದೆ. ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳ ಅಳವಡಿಕೆಗೆ ನಾಂದಿ ಆಗುತ್ತದೆಎಂದು ಸರ್ಕಾರ ಸಮರ್ಥಿಸಿಕೊಂಡಿದೆ.ಪ್ರತಿಭಟನಾಕಾರರು ಮತ್ತು ಸರ್ಕಾರದ ಪ್ರತಿನಿಧಿಗಳ ನಡುವೆ ಅನೇಕ ಸುತ್ತಿನ ಮಾತುಕತೆಗಳು ನಡೆದಿವೆ ಆದರೆ ಪ್ರತಿಭಟನೆ, ಗೊಂದಲಗಳು ಮುಂದುವರಿದಿದೆ. 

SCROLL FOR NEXT