ದೇಶ

ಬುದ್ಧದೇವ ಭಟ್ಟಾಚಾರ್ಯ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ, ಆದರೂ ಗಂಭೀರ: ಆಸ್ಪತ್ರೆ ಮೂಲಗಳು

Nagaraja AB

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಬುದ್ದದೇವ ಭಟ್ಟಾಚಾರ್ಯ ಅವರ ಆರೋಗ್ಯದಲ್ಲಿ ಇಂದು ಬೆಳಗ್ಗೆ ಸ್ವಲ್ಪ ಚೇತರಿಕೆ ಕಂಡುಬಂದಿದೆ. ಆದರೂ ಪರಿಸ್ಥಿತಿ ಇನ್ನೂ ಗಂಭೀರವಾಗಿರುವುದಾಗಿ ಆಸ್ಪತ್ರೆ ಮೂಲಗಳು ಹೇಳಿವೆ. 

 ಐವರು ವೈದ್ಯರನ್ನೊಳಗೊಂಡ ತಂಡ ಬುದ್ಧದೇವ ಭಟ್ಟಾಚಾರ್ಯರ ಆರೋಗ್ಯ ಪರಿಸ್ಥಿತಿಯ ಪರಾಮರ್ಶೆ ನಡೆಸುತ್ತಿದ್ದು, ಮುಂದಿನ ಚಿಕಿತ್ಸೆ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಅವರ ಆರೋಗ್ಯದಲ್ಲಿ ಸ್ಪಲ್ಪ ಚೇತರಿಕೆ ಕಂಡುಬಂದಿದೆ. ಅವರನ್ನು ವೆಂಟಿಲೆಟರ್ ನಲ್ಲಿ ಇಡಲಾಗಿದೆ. ಆದಾಗ್ಯೂ, ಅವರ ಪರಿಸ್ಥಿತಿ ಗಂಭೀರವಾಗಿರುವುದಾಗಿ ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಸಿರಾಟ ಸಂಬಂಧಿತ ತೊಂದರೆಯಿಂದಾಗಿ ಬುಧವಾರ ಮಧ್ಯಾಹ್ನ  ಖಾಸಗಿ ಆಸ್ಪತ್ರೆಯೊಂದರ  ತೀವ್ರ ನಿಗಾ ಘಟಕದಲ್ಲಿ ದಾಖಲಾದ 76 ವರ್ಷದ ಬುದ್ಧದೇವ ಭಟ್ಟಾಚಾರ್ಯ ಅವರನ್ನು ವೆಂಟಿಲೆಟರ್ ನಲ್ಲಿ ಇಡಲಾಗಿದೆ. ಸಕಾರಾತ್ಮಕ ಪ್ರತಿಕ್ರಿಯೆ ಕಂಡುಬಂದರೆ ವೆಂಟಿಲೆಟರ್ ತೆಗೆಯಲಾಗುವುದು ಎಂದು ಅವರು ಹೇಳಿದ್ದಾರೆ.

2000ದಿಂದ 2011ರವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಬುದ್ದದೇವ ಭಟ್ಟಾಚಾರ್ಯ, ಧೀರ್ಘಕಾಲದ ಉಸಿರಾಟ ಸಮಸ್ಯೆ ಹಾಗೂ ವಯೋ ಸಹಜ ಕಾಯಿಲೆಗಳಿದ  ಬಳಲುತ್ತಿದ್ದಾರೆ. ಆರೋಗ್ಯದ ಸಮಸ್ಯೆಯಿಂದಾಗಿ ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳುತ್ತಿರಲಿಲ್ಲ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಸ್ಪತ್ರೆಗೆ ಭೇಟಿ ನೀಡಿ, ಭಟ್ಟಾಚಾರ್ಯರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಬೇಗ ಗುಣಮುಖರಾಗಿ ಎಂದು ಪ್ರಾರ್ಥಿಸಿದ್ದಾರೆ.

SCROLL FOR NEXT