ದೇಶ

ಕೃಷಿ ಕಾನೂನುಗಳು, ಕನಿಷ್ಠ ಬೆಂಬಲ ಬೆಲೆಗೂ ಸಂಬಂಧವಿಲ್ಲ- ನಿರ್ಮಲಾ ಸೀತಾರಾಮನ್

Nagaraja AB

ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳು, ಕನಿಷ್ಠ ಬೆಂಬಲ ಬೆಲೆಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ ಸಚಿವರು, ಎಂಎಸ್ ಪಿ ಬಗ್ಗೆ , ಈ ಕಾನೂನುಗಳ ಬಗ್ಗೆ ಉದ್ಬವಿಸುವ ಅನುಮಾನಗಳಿಗೆ ಸೂಕ್ತ ಪುರಾವೆಗಳಿಲ್ಲ ಮತ್ತು ಯಾವುದೇ ಸಂಬಂಧ ಹೊಂದಿಲ್ಲ ಎಂದಿದ್ದಾರೆ. ಕಳೆದ ಆರು ವರ್ಷಗಳನ್ನು ಅಥವಾ ಅದಕ್ಕಿಂತ ಹಿಂದಿನ ಆರು ವರ್ಷಗಳೊಂದಿಗೆ ಹೋಲಿಸಿದ್ದಲ್ಲಿ, ಖರೀದಿಯ ಪ್ರಮಾಣ, ಕೊಟ್ಟ ಬೆಲೆ ಮತ್ತು ರೈತನಿಗೆ ಸಕಾಲದಲ್ಲಿ ಘೋಷಿಸಿದ ಬೆಲೆ, ನಿಷ್ಠ ಒಂದೂವರೆ ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.

ಈ ಕಾನೂನುಗಳನ್ನು ತರುವ ಮುನ್ನ ಮಧ್ಯಸ್ಥಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಷ್ಟು ಸಮಾಲೋಚನೆಗಳನ್ನು ಸರ್ಕಾರ ನಡೆಸಿಲಿಲ್ಲ ಎಂಬ ಆರೋಪಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಂತಹ ಆರೋಪ ಸತ್ಯಕ್ಕೆ ದೂರ ಎಂದರು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೇ ಈ ಮೂರು ಕಾನೂನುಗಳ ಬಗ್ಗೆ ಸಮಾಲೋಚನೆ ನಡೆದಿತ್ತು ಎಂದೂ ಸಚಿವರು ಹೇಳಿದ್ದಾರೆ.

SCROLL FOR NEXT