ನವದೆಹಲಿ: ದೆಹಲಿಯ ಕೊರೆಯುವ ಚಳಿಗೆ ರೈತನೊಬ್ಬ ಸಾವನ್ನಪ್ಪಿದ್ದಾನೆ, ದೆಹಲಿ ಗಡಿಭಾಗದಲ್ಲಿ ಮೂವರು ಮಕ್ಕಳ ತಂದೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರುದ್ಧ ಕಳೆದ 22 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮೃತ ರೈತ ಭಾಗವಹಿಸಿದ್ದ, ಈತನಿಗೆ 10, 12 ಮತ್ತು 14 ವರ್ಷ ವಯಸ್ಸಿನ ಮಕ್ಕಳಿವೆ, ಅತಿಯಾದ ಚಳಿಯಿಂದ ಆತ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ.
ದೆಹಲಿ-ಹರಿಯಾಣ ಗಡಿಯಲ್ಲಿ ನಡೆದ ಪ್ರತಿಭಟನೆಯ ಕೇಂದ್ರದಿಂದ 2 ಕಿ.ಮೀ ದೂರದಲ್ಲಿ ಸಿಖ್ ಪಾದ್ರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಕೆಲವೇ ಗಂಟೆಗಳ ನಂತರ ಸಾವಿನ ಹೊರಬಿದ್ದಿದೆ.